ಉದ್ಯೋಗ ಭರವಸೆಯೊಡ್ಡಿ ಸೀತಾಂಗೋಳಿ ನಿವಾಸಿಯ ಹಣ ಲಪಟಾವಣೆ: ತನಿಖೆ ಆರಂಭ

ಕುಂಬಳೆ: ಏರ್‌ಫೋರ್ಸ್‌ನಲ್ಲಿ ಉದ್ಯೋಗದ ಭರವಸೆಯೊಡ್ಡಿ ಸೀತಾಂ ಗೋಳಿ ನಿವಾಸಿಯ ಹಣ ಲಪಟಾ ಯಿಸಿದ ಇಡುಕ್ಕಿ ನಿವಾಸಿ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಸೀತಾಂಗೋಳಿ ಉಳಿಯ ಎಡನಾಡ್ ಕಾವೇರಿಕಾನ ನಿವಾಸಿ ಕೆ. ಚೇತನ್ ನೀಡಿದ ದೂರಿನಂತೆ ಇಡುಕ್ಕಿ ತೋಪುಂಪುಳ ಮುದಲಕುಳಂ ವಿಸ್ಮಯ ಹೌಸ್‌ನ ಸನೀಶ್ ಎಂಬಾತನ ವಿರುದ್ಧ ಕೇಸು ದಾಖಲಿಸಲಾ ಗಿದೆ. ಉದ್ಯೋಗ ದೊರಕಿಸಿ ಕೊಡುವು ದಾಗಿ ಭರವಸೆಯೊಡ್ಡಿದ ಹಿನ್ನೆಲೆಯಲ್ಲಿ ಕಳೆದ ಜುಲೈ 19ರಿಂದ 29ರವರೆಗೆ ಗೂಗಲ್ ಪೇ ಹಾಗೂ ಸೌತ್ ಇಂಡ್ಯನ್ ಬ್ಯಾಂಕ್‌ನ ನೆಡುಮಂಗಾಡ್ ಶಾಖೆ ಮೂಲಕ ಒಟ್ಟು 140150 ರೂಪಾಯಿ ಕಳುಹಿಸಿ ಕೊಟ್ಟಿರುವುದಾಗಿಯೂ, ಆದರೆ ಹಣ ಪಡೆದ  ಬಳಿಕ ಆತನಿಂದ ಯಾವುದೇ ಮಾಹಿತಿ ಇಲ್ಲವೆಂದು ಚೇತನ್ ದೂರಿನಲ್ಲಿ ತಿಳಿಸಿದ್ದಾರೆ.

You cannot copy contents of this page