ಉಪ್ಪಳ ಸರ್ವೀಸ್ ರಸ್ತೆಯಲ್ಲಿ ಕೆಸರಿನಲ್ಲಿ ಸಿಲುಕಿದ ಟ್ಯಾಂಕರ್ ಲಾರಿ

ಉಪ್ಪಳ: ಉಪ್ಪಳ ಗೇಟ್ ಸರ್ವೀಸ್ ರಸ್ತೆಯಲ್ಲಿ ನಿನ್ನೆ ರಾತ್ರಿ 11 ಗಂಟೆಗೆ ಟ್ಯಾಂಕರ್ ಲಾರಿಯೊಂದು ಸಿಲುಕಿಕೊಂಡಿತ್ತು. ಇದರಿಂದ ಅಲ್ಪ ಹೊತ್ತು ಸಾರಿಗೆ ಅಡಚಣೆ ಎದುರಾ ಯಿತು. ಮಂಗಳೂರಿನಿಂದ ಕೊಲ್ಲಂಗೆ ಅಡುಗೆ ಅನಿಲ ಸಾಗಿಸುತ್ತಿದ್ದ ಲಾರಿಯ ಚಕ್ರಗಳು ರಸ್ತೆ ಬದಿ ಹೂತು ಹೋಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ಸಂಜೆ ಆಂಬುಲೆನ್ಸ್ ಹಾಗೂ ಕಾರು ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದ ಹಿನ್ನೆಲೆಯಲ್ಲಿ  ಟ್ಯಾಂಕರ್ ಲಾರಿಯನ್ನು  ಸರ್ವೀಸ್ ರಸ್ತೆಯಲ್ಲಿ ಬಿಡಲಾಗಿತ್ತು.  ಈ ವೇಳೆ ಬೇರೊಂದು ವಾಹನಕ್ಕೆ ಸೈಡ್ ನೀಡುತ್ತಿದ್ದಾಗ ಟ್ಯಾಂಕರ್ ಲಾರಿ  ಕೆಸರಲ್ಲಿ ಸಿಲುಕಿಕೊಂಡಿದೆ. ಬಳಿಕ ಉಪ್ಪಳದಿಂದ ಸಂದೀಪ್ ನೇತೃತ್ವದ ಅಗ್ನಿಶಾಮಕದಳ ತಲುಪಿ ಕ್ರೇನ್ ಸಹಾಯದಿಂದ ಲಾರಿಯನ್ನು ಮೇಲಕ್ಕೆತ್ತಲಾಯಿತು.

You cannot copy contents of this page