ಉಪ್ಪಳದ ಅಂಗಡಿಯಿಂದ ಲಕ್ಷಾಂತರ ರೂ.ಗಳ ಸಾಮಗ್ರಿ ಕಳವುಗೈದ ಆರೋಪಿ ಸೆರೆ

ಉಪ್ಪಳ: ಉಪ್ಪಳದ ಅಂಗಡಿ ಯೊಂದರಿಂದ ಲಕ್ಷಾಂತರ ರೂಪಾಯಿಗಳ ಕಬ್ಬಿಣದ ಸಾಮಗ್ರಿಗಳನ್ನು ಕಳವು ನಡೆಸಿದ ಪ್ರಕರಣದ  ಆರೋಪಿಯನ್ನು ಮಂ ಜೇಶ್ವರ ಪೊಲೀಸರು ಸೆರೆಹಿಡಿದಿದ್ದಾರೆ.

ದ.ಕ. ಜಿಲ್ಲೆಯ ಮಂಗಳೂರು ಕಸಬ ಬೆಂಗ್ರೆ ನಿವಾಸಿ ನೌಮಾನ್ (31) ಎಂಬಾತ ಬಂಧಿತ ಆರೋ ಪಿಯಾಗಿದ್ದಾನೆ. ಈತ ಉಪ್ಪಳ ದಲ್ಲಿರುವ ವೈಟ್ ಮಾರ್ಟ್ ಎಂಬ ಸಂಸ್ಥೆಯ ಗೋಡೌನ್‌ನ ಶಟರ್ ಮುರಿದು  ಲಕ್ಷಾಂತರ ರೂಪಾಯಿ ಮೌಲ್ಯದ ಕಬ್ಬಿಣ ಹಾಗೂ ಸ್ಟೀಲ್ ಸಾಮಗ್ರಿಗಳನ್ನು ಕಳವುಗೈದ ಪ್ರಕರಣದ ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಕಳವುಗೈದ ಸಾಮಗ್ರಿಗಳನ್ನು ಈತ ಪಿಕಪ್ ವಾಹ ನದಲ್ಲಿ ಸಾಗಿಸಿ ಮಂಗಳೂರಿನಲ್ಲಿರುವ ಅಂಗಡಿಗೆ ಮಾರಾಟಗೈದಿದ್ದನು. ಅದನ್ನು ಪೊಲೀಸರು ಪತ್ತೆಹಚ್ಚಿ ವಶಪಡಿಸಿದ್ದಾರೆ. ಮಂಜೇಶ್ವರ ಇನ್‌ಸ್ಪೆಕ್ಟರ್ ಅನೂಪ್ ಕುಮಾರ್, ಎಸ್‌ಐಗಳಾದ ರತೀಶ್ ಗೋಪಿ, ಉಮೇಶ್, ಎಸ್‌ಸಿಪಿಒ ರಾಜೇಶ್ ಕುಮಾರ್, ಸಿಪಿಒಗಳಾದ ಸಚಿತ್, ವಿಜಿನ್, ರಘು, ವಂದನ, ಪ್ರಶೋಬ್ ಎಂಬಿವರನ್ನೊಳಗೊಂಡ ತಂಡ ಆರೋಪಿಯನ್ನು ಬಂಧಿಸಿದೆ.

You cannot copy contents of this page