ಎ.ಟಿ.ಎಂ ಕೌಂಟರ್ ದರೋಡೆಗೆತ್ನ ಪ್ರಕರಣ: ಆರೋಪಿ ಸೆರೆ, ನ್ಯಾಯಾಂಗ ಬಂಧನ ; ಬಂಧಿತ ಆರು ವಾಹನ ಕಳವು ಪ್ರಕರಣಗಳಲ್ಲೂ ಆರೋಪಿ

ಕಾಸರಗೋಡು: ನಗರದ ಎಂ.ಜಿ ರಸ್ತೆ ಬಳಿಯ ಬ್ಯಾಂಕ್ ಆಫ್ ಇಂಡಿ ಯಾದ ಎಟಿಎಂ  ಕೌಂಟರ್‌ನ್ನು ಒಡೆದು ದರೋಡೆಗೈಯ್ಯಲೆತ್ನಿಸಿದ ಪ್ರಕರಣದ ಆರೋಪಿಯನ್ನು ಕಾಸರ ಗೋಡು ಪೊಲೀಸರು ಬಂಧಿಸಿದ್ದಾರೆ. ಹೊಸದುರ್ಗ ತಚ್ಚಂಗಾಡ್ ಅರವತ್ತ್ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿ ರುವ ಪಿ.ಕೆ. ಮುಹಮ್ಮದ್ ಸಫ್ವಾನ್ (19) ಬಂಧಿತ ಆರೋಪಿ.

ಕಳೆದ ಸೋಮವಾರ ಮುಂಜಾನೆ ಎಟಿಎಂ ಕೌಂಟರ್‌ನಲ್ಲಿ ದರೋಡೆಗೆ ಯತ್ನ ನಡೆಸಲಾಗಿತ್ತು. ಇದರ ಡಿಜಿಟಲ್ ಲಾಕ್‌ನ್ನು ಹೊಡೆದು ಹಾನಿಗೊಳಿಸಲಾಯಿತಾದರೂ ಹಣ ಒಳಗೊಂಡ ಲಾಕರನ್ನು ತೆರೆಯಲು ಸಾಧ್ಯವಾಗದಾಗ  ಆರೋಪಿ ಬಳಿಕ ಆ ಯತ್ನವನ್ನು ಅಲ್ಲಿಗೇ ಉಪೇಕ್ಷಿಸಿದ್ದನೆಂದು ತನಿಖೆಯಲ್ಲ್ಲಿ ಸ್ಪಷ್ಟಗೊಂಡಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ನಿರಂತರ ಮೂರು ದಿನ ಬ್ಯಾಂಕ್‌ಗೆ ರಜೆಯಾಗಿತ್ತು. ಬ್ಯಾಂಕ್ ಅಧಿಕಾರಿಗಳು ನಿನ್ನೆ ಬೆಳಿಗ್ಗೆ ಬ್ಯಾಂಕ್ ತೆರೆಯಲು ಬಂದಾಗಲಷ್ಟೇ ಎಟಿಎಂ ಕೌಂಟರ್ ಒಡೆದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಬಳಿಕ ಬ್ಯಾಂಕ್‌ನ ಅಸಿಸ್ಟೆಂಟ್ ಮೆನೇಜರ್ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಆರಂಭಿಸಿದ ಕೆಲವೇ ತಾಸುಗಳೊಳಗಾಗಿ ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದ್ದಾರೆ.

ಎಟಿಎಂ ಕೌಂಟರ್‌ನ ಸಿಸಿ ಟಿವಿ ಕ್ಯಾಮರಾದಲ್ಲಿ ಮುಖಮುಚ್ಚಿಕೊಂಡು ಯುವಕನೋರ್ವ ಅದರೊಳಗೆ ಪ್ರವೇಶಿಸಿ ಕೌಂಟರನ್ನು ಒಡೆಯುವ ದೃಶ್ಯ ಪತ್ತೆಯಾಗಿತ್ತು.  ಎಟಿಎಂ ಕೌಂಟರ್ ದರೋಡೆ ಯತ್ನ ವಿಫಲಗೊಂಡ ಬಳಿಕ ಆರೋಪಿ ನಗರದ ಹಳೆ ಬಸ್ ನಿಲ್ದಾ ಣಕ್ಕೆ ಬಂದು ಅಲ್ಲಿನ ಯು.ಕೆ. ಮಾಲ್ ವ್ಯಾಪಾರ ಸಮುಚ್ಛಯದಲ್ಲಿ  ಪಾರ್ಕ್ ಮಾಡಲಾಗಿದ್ದ ಆಲಂಪಾಡಿಯ ನೌಶಾದ್ ಎಂಬವರ ಬೈಕ್‌ನ್ನು ಕದ್ದು ಸಾಗಿಸಿದ್ದನ. ಬೈಕ್ ಕಳವಿನ ಬಗ್ಗೆ  ನೌಶಾದ್ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಆ ಪರಿಸರದ ಸಿಸಿ ಟಿವಿ ಕ್ಯಾಮರಾಗಳ ದೃಶ್ಯ ಪರಿಶೀಲಿಸಿದಾಗ ಅದು ಮತ್ತು ಎಟಿಎಂ ಕ್ಯಾಮರಾದಲ್ಲಿ ಗೋಚರಿ ಸಿದ ದೃಶ್ಯದ ವ್ಯಕ್ತಿ ಓರ್ವನೇ ಆಗಿರುವು ದಾಗಿ ಸ್ಪಷ್ಟಗೊಂಡಿತ್ತೆಂದೂ, ಅದರ ಜಾಡು ಹಿಡಿದು ನಡೆಸಿದ ಮುಂದಿನ ತನಿಖೆಯಲ್ಲಿ ಆರೋಪಿಯನ್ನು ಬಂಧಿಸಲು ಸಾಧ್ಯವಾಯಿತೆಂದು ಪೊಲೀಸರು ತಿಳಿಸಿದ್ದಾರೆ.

ಕಾಸರಗೋಡು ಮತ್ತು ಬೇಕಲ ಪೊಲೀಸ್ ಠಾಣೆ ಸೇರಿದಂತೆ  ಆರೋ ಪಿಯ ವಿರುದ್ಧ ಆರು ವಾಹನ ಕಳವು ಪ್ರಕರಣಗಳು ಇರುವುದಾಗಿ  ಪೊಲೀ ಸರು ತಿಳಿಸಿದ್ದಾರೆ. ಬಂಧಿತರನ್ನು ಪೊಲೀಸರು ನಂತರ ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ (ಪ್ರಥಮ)ದಲ್ಲಿ ಹಾಜರುಪಡಿಸಿದ ಬಳಿಕ ನ್ಯಾಯಾಂ ಗ ಬಂಧನದಲ್ಲಿರಿಸಲಾಯಿತು.

You cannot copy contents of this page