ಎಂಡಿಎಂಎ ಸಹಿತ ಯುವಕ ಸೆರೆ
ಕಾಸರಗೋಡು: ಮಾದಕ ದ್ರವ್ಯವಾದ 1.040 ಗ್ರಾಂ ಎಂಡಿಎಂಎ ಸಹಿತ ಅಜಾನೂರು ಕುಳಬೈಲಿನ ಎಂ. ಶಂಶೀರಾ ರಹ್ಮಾನ್ (34) ಎಂಬಾತನನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ಪೊಲೀಸರನ್ನು ಕಂಡು ಹೆದರಿ ಪಲಾಯನಗೈಯ್ಯಲೆತ್ನಿಸಿದ ಈತನನ್ನು ಪೊಲೀಸರು ಬೆನ್ನಟ್ಟಿ ಸೆರೆಹಿಡಿದಿದ್ದಾರೆ. ತನ್ನ ಸ್ವಂತ ಉಪಯೋಗಕ್ಕಾಗಿ ಮಂಗಳೂರಿನಿಂದ ಈ ಮಾದಕದ್ರವ್ಯ ತರಿಸಿದ್ದೆನೆಂದು ಬಂಧಿತನು ಪೊಲೀಸರಲ್ಲಿ ತಿಳಿಸಿದ್ದಾನೆ.