ತಿರುವನಂತಪುರ: ರಾಜ್ಯ ನೌಕರರ ಸೌಲಭ್ಯಗಳನ್ನು ಎಡರಂಗ ಸರಕಾರ ತಡೆಹಿಡಿಯುತ್ತಿದೆಯೆಂದು ಆರೋಪಿಸಿ ಎನ್ಜಿಒ ಸಂಘ್ ನೇತೃತ್ವದಲ್ಲಿ ರಾಜ್ಯ ಸರಕಾರಿ ನೌಕರರು 24ರಂದು ಸೆಕ್ರೆಟರಿ ಯೇಟ್ಗೆ ಮಾರ್ಚ್ ನಡೆಸುವರು. ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಕೊಂಡು ನಡೆಯುವ ಮಾರ್ಚ್ನ್ನು ಬಿಎಂಎಸ್ ರಾಜ್ಯ ಉಪಾಧ್ಯಕ್ಷ ಪಿ. ಮುರಳೀಧರನ್ ಉದ್ಘಾಟಿಸುವರು. ಬೆಳಿಗ್ಗೆ 10.30ಕ್ಕೆ ಮ್ಯೂಸಿಯಂ ಪಬ್ಲಿಕ್ ಆಫೀಸ್ ಕಂಪೌಂಡ್ನಿಂದ ಮಾರ್ಚ್ ಆರಂಭಗೊಳ್ಳಲಿದೆ.
