ಎರಡನೇ ‘ವಂದೇ ಭಾರತ್’ ಭಾನುವಾರ ಪ್ರಧಾನಮಂತ್ರಿ ಉದ್ಘಾಟನೆ
ಕಾಸರಗೋಡು: ಕಾಸರಗೋಡಿ ನಿಂದ ಆಲಪ್ಪುಳ ದಾರಿಯಾಗಿ ತಿರುವನಂತಪುರ ತನಕದ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಭಾನುವಾರ ಮಧ್ಯಾಹ್ನ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿ ಸುವರು. ಇದರ ಉದ್ಘಾಟನಾ ಸಮಾರಂಭ ಪಾಲ್ಘಾಟ್ ರೈಲ್ವೇ ವಿಭಾಗೀಯ ಕಚೇರಿಯಲ್ಲಿ ನಡೆಯಲಿದೆ. ಕೇರಳ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಾಗಿ ಒಂಭತ್ತು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಗಳನ್ನೂ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಧಾನಮಂತ್ರಿ ಸೆ. ೨೪ರಂದು ಉದ್ಘಾಟಿಸುವರು.
ಉದ್ಘಾಟನಾ ಸಮಾರಂಭ ದಂಗವಾಗಿ ಅಂದು ಕಾಸರಗೋಡು ರೈಲು ನಿಲ್ದಾಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಉದ್ಘಾಟನೆ ಬಳಿಕ ಈ ಹೊಸ ವಂದೇ ಭಾರತ್ ರೈಲು ಸೇವೆ ಪಾಲ್ಘಾಟ್‌ನಿಂದ ತಿರುವನಂತಪುರ ತನಕ ವಿಶೇಷ ಸೇವೆ ನಡೆಸಲಿದೆ. ಮರುದಿನ (ಸೋಮವಾರ)ದಂದು ರೈಲು ಸೇವೆ ಇರದು. ನಂತರ ಮಂಗಳವಾರ ಅಥವಾ ಬುಧವಾರದಿಂದ ಈ ರೈಲು ದೈನಂದಿನ ಸೇವೆ ಆರಂಭಿಸಲಿದೆ.
ಈಗ ಕಾಸರಗೋಡು -ತಿರುವನಂತಪುರ ತನಕ ಸೇವೆ ನಡೆಸುತ್ತಿರುವ ಒಂದನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಬಣ್ಣ ಬಿಳಿ ಮತ್ತು ನಸುನೀಲಿ ಬಣ್ಣದ್ದಾಗಿದ್ದು, ಕೇರಳಕ್ಕೆ ಈಗ ಮಂಜೂರು ಮಾಡಲಾಗಿರುವ ಎರಡನೇ ರೈಲಿನ ಬಣ್ಣ ಬಳಿ ಮತ್ತು ನಸು ಕಿತ್ತಳೆ ಬಣ್ಣದ್ದಾಗಿದೆ. ಈ ರೈಲು ಈಗ ಚೆನ್ನೈ ರೈಲ್ವೇ ವಿಭಾಗೀಯ ನಿಲ್ದಾಣದಲ್ಲಿದ್ದು, ಅದು ಇಂದು ಅಪರಾಹ್ನ ೨.೪೦ಕ್ಕೆ ಪಾಲ್ಘಾಟ್ ವಿಭಾಗೀಯ ರೈಲು ನಿಲ್ದಾಣಕ್ಕೆ ಪ್ರಯಾಣ ಆರಂಭಿಸಲಿದೆ.