ಎಲ್ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 48.50 ರೂ. ಏರಿಕೆ
ಹೊಸದಿಲ್ಲಿ: ನವರಾತ್ರಿ ಉತ್ಸವದ ಹೊತ್ತಲ್ಲೇ ದೇಶಾದ್ಯಂತ ತೈಲ ಕಂಪೆನಿಗಳು 19 ಕೆ.ಜಿ ವಾಣಿಜ್ಯ ಅನಿಲ ಸಿಲಿಂಡರ್ ಬೆಲೆಯಲ್ಲಿ 48.50 ರೂ. ಏರಿಕೆ ತಂದಿದೆ. ಈ ಹೆಚ್ಚಳವನ್ನು ಇಂದಿನಿಂದಲೇ ಅನ್ವಯಗೊಳಿಸಲಾಗಿದೆ.
ಇಂಡಿಯನ್ ಆಯಿಲ್ ಬಿಡುಗಡೆ ಮಾಡಿರುವ ಇತ್ತೀಚಿನ ದರಗಳ ಪ್ರಕಾರ ಇಂದಿನಿಂದ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆ ದೆಹಲಿ ೧೭೪೦ ರೂ., ಮುಂಬೈ 1692.50 ರೂ., ಚೆನ್ನೈಯಲ್ಲಿ 1903, ಕೋಲ್ಕತ್ತಾದಲ್ಲಿ 1850.50 ರೂ ಆಗಿರುತ್ತದೆ. ಈ ಹಿಂದೆ ಸೆಪ್ಟಂಬರ್ನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ೩೯ ರೂ. ಏರಿಕೆ ಯಾಗಿತ್ತು. ನಂತರ ಈಗ ಮತ್ತೆ ಬೆಲೆ ಹೆಚ್ಚಿಸಲಾಗಿದೆ.
ಹಣದುಬ್ಬರದಿಂದ ಜನರು ತತ್ತರಿಸುತ್ತಿರುವಾಗಲೇ ಅಡುಗೆ ಅನಿಲ ದರ ಮತ್ತೆ ಹೆಚ್ಚಿಸಲಾಗಿದೆ. ಇದರ ಪರಿಣಾಮ ಹೋಟೆಲ್ಗಳಲ್ಲಿ ಆಹಾರ ಸಾಮಗ್ರಿಗಳ ಬೆಲೆಯೇರಿಕೆಗೆ ರಹದಾರಿ ಮಾಡಿಕೊದಂತಾಗಿದೆ.