ಎಸ್.ಕೆ.ಎಸ್.ಎಸ್.ಎಫ್ ಬಾಕ್ರಬೈಲ್ ಶಾಖಾ ರಜತ ವಾರ್ಷಿಕ ಸಮಾರೋಪ ನಾಳೆ

ಹೊಸಂಗಡಿ: ಎಸ್‌ಕೆಎಸ್ ಎಸ್‌ಎಫ್ ಬಾಕ್ರಬೈಲ್ ಶಾಖೆಯ ರಜತ ವಾರ್ಷಿಕದ ಸಮಾರೋಪ ನಾಳೆ ಸಂಜೆ ೪.೩೦ಕ್ಕೆ ಬಾಕ್ರಬೈಲ್ ಶಾಲಾ ಮೈದಾನದಲ್ಲಿ ನಡೆಯಲಿದೆ. ಇದಕ್ಕೆ ಸಿದ್ಧತೆ ಪೂರ್ಣಗೊಂಡಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳು ತಿಳಿಸಿದ್ದಾರೆ.

ಸಮಾರೋಪ ಸಮಾರಂಭವನ್ನು ಸಮಸ್ತ ಕೇಂದ್ರ ಮುಶಾವರ ಸದಸ್ಯ ಬಿ.ಕೆ. ಅಬ್ದುಲ್ ಖಾದರ್ ಮುಸ್ಲಿಯಾರ್ ಬಂಬ್ರಾಣ ಉದ್ಘಾಟಿಸುವರು. ಪಾತೂರು ಸಂಯುಕ್ತ ಜಮಾಯತ್ ಖಾದಿ ಅಹಮ್ಮದ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸುವರು. ಮುಹಮ್ಮದ್ ಫೈಸಿ ಕಜೆ ಪ್ರಸ್ತಾಪಿಸುವರು. ಸತ್ತಾರ್ ಪಂದಲ್ಲೂರ್, ನೌಷಾದ್ ಬಾಖವಿ ಭಾಗವಹಿಸುವರು. ಇದೇ ಕಾರ್ಯಕ್ರಮದಲ್ಲಿ ಸ್ಥಾಪಕ ಮುಖಂಡರನ್ನು ಗೌರವಿಸಲಾ ಗುವುದು. ಇಬ್ರಾಹಿಂ ಬಾತಿಷ ತಂಙಳ್ ಮುಜ್ಲಿ ಸುನ್ನೂರ್‌ಗೂ, ಸೈನುಲ್ ಆಬಿದೀನ್ ತಂಙಳ್ ಕುನ್ನುಂಗೈ ಸಾಮೂಹಿಕ ಪ್ರಾರ್ಥನೆಗೂ ನೇತೃತ್ವ ನೀಡುವರು. ಕರ್ನಾಟಕ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್, ಶಾಸಕ ಎಕೆಎಂ ಅಶ್ರಫ್ ಎಕೆಎಂ ಅಬ್ದುಲ್ ಮಜೀದ್ ದಾರಿಮಿ, ಫಾರೂಖ್ ದಾರಿಮಿ ಕೊಲ್ಲಂಬಾಡಿ ಮಾತನಾಡು ವರು. ಈ ಬಗ್ಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಪಿ.ಬಿ. ಅಬೂಬಕರ್ ಪಾತೂರು, ಮುಹಮ್ಮದ್ ಫೈಸಿ ಕಜೆ, ಉಸ್ಮಾನ್ ಅಬ್ದುಲ್ ಲತೀಫ್ ಭಾಗವಹಿಸಿದರು.

You cannot copy contents of this page