ಎಸ್.ಟಿ.ಯು. ಹೋರಾಟ ಸಂದೇಶ ಯಾತ್ರೆಗೆ ನಾಳೆ ಚಾಲನೆ

ಕಾಸರಗೋಡು: ಕೇಂದ್ರ ಸರಕಾರ ಜನದ್ರೋಹ ನಿಲುವು ಅನುಸರಿಸುತ್ತಿದೆ ಎಂದು ರಾಜ್ಯ ಮತ್ತು ರಾಜ್ಯ ಸರಕಾರ ದುರಾಡಳಿತ ನಡೆಸುತ್ತಿದ್ದು, ಅಂತಹ ನೀತಿಗಳನ್ನು ಪ್ರತಿಭಟಿಸಿ ಮುಸ್ಲಿಂ ಲೀಗ್‌ನ ಕಾರ್ಮಿಕ ಸಂಘಟನೆಯಾದ ಸ್ವತಂತ್ರ ತೊಯಿಲಾಳಿ ಯೂನಿಯನ್ (ಎಸ್‌ಟಿಯು) ನೇತೃತ್ವದ ಕಾಸರಗೋಡಿನಿಂದ ತಿರುವನಂತಪುರ ತನಕ ಹೋರಾಟ ಸಂದೇಶ ಯಾತ್ರೆ ನಡೆಸಲಾಗುವುದು.

ಈ ಮಧ್ಯೆ ನಾಳೆ ಅಪರಾಹ್ನ ೩ ಗಂಟೆಗೆ ನಗರದ ತಾಯಲಂಗಡಿ ಯಿಂದ ಪ್ರಯಾಣ ಆರಂಭಿಸಲಿದೆ. ಮುಸ್ಲಿಂಲೀಗ್ ರಾಜ್ಯ ಅಧ್ಯಕ್ಷ ಪಾಣಕ್ಕಾಡ್ ಸಾಧಿಕ್ ಅಲಿ ಶಿಹಾಬ್ ತಂಙಳ್ ಉದ್ಘಾಟಿಸು ವರು. ಎಸ್‌ಟಿಯು ಕೇಂದ್ರ ಉಪಾಧ್ಯಕ್ಷ ಎ. ಅಬ್ದುಲ್ ರಹ್‌ಮಾನ್ ಅಧ್ಯಕ್ಷತೆ ವಹಿಸುವರು. ಪಿ.ಎಂ.ಎ. ಸಲಾಂ, ಫೈಸಲ್ ಬಾಬು ಮೊದಲಾದವರು ಭಾಗವಹಿಸಿ ಮಾತನಾಡುವರು. ಯಾತ್ರೆ ನವೆಂಬರ್ ೨ರಂದು ತಿರುವನಂತಪುರ ದಲ್ಲಿ ಸಮಾಪ್ತಿಹೊಂದಲಿದೆ. ಎಸ್‌ಟಿಯು ರಾಜ್ಯ ಅಧ್ಯಕ್ಷ ಎಂ. ರಹಮತ್ತುಲ್ಲ ಅವರ ನೇತೃತ್ವದಲ್ಲಿ ಈ ಯಾತ್ರೆ ನಡೆಯಲಿದೆ. ತಿರುವನಂತಪುರ ದಲ್ಲಿ ನಡೆಯುವ ಸಮಾರೋಪ ಸಮಾರಂಭವನ್ನು ಮುಸ್ಲಿಂ ಲೀಗ್ ಕೇಂದ್ರ ಪ್ರಧಾನ ಕಾರ್ಯದರ್ಶಿ ಪಿ.ಕೆ. ಕುಂಞಾಲಿಕುಟ್ಟಿ ಉದ್ಘಾಟಿಸವರು.

RELATED NEWS

You cannot copy contents of this page