ಎಸ್‌ಎಸ್‌ಎಫ್ ಸ್ಥಾಪಕ ದಿನ: ಉಪ್ಪಳ, ಮಂಜೇಶ್ವರ ವಲಯದಲ್ಲಿ ಇಂದು ಸಮಾವೇಶ

ಕುಂಬಳೆ: ಎಸ್‌ಎಸ್‌ಎಫ್ ಸ್ಥಾಪಕ ದಿನದಂಗವಾಗಿ ಉಪ್ಪಳ ಡಿವಿಶನ್, ಮಂಜೇಶ್ವರ ಡಿವಿಶನ್ ಆಶ್ರಯದಲ್ಲಿ ಸೆಲೆಬ್ರಿಟಿಂಗ್ ಹ್ಯುಮ್ಯಾನಿಟಿ ಎಂಬ ಹೆಸರಲ್ಲಿ ಇಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಉಪ್ಪಳ ಡಿವಿಶನ್ ಸಮ್ಮೇಳನ ಮುಟ್ಟಂ ಮಕ್ದೂಮ್‌ನಲ್ಲಿ ನಡೆಯಲಿದೆ. ಮಂಜೇಶ್ವರ ಡಿವಿಶನ್ ಸಮ್ಮೇಳನ ಕೋಳ್ಯೂರುಪದವಿನಲ್ಲಿ ನಡೆಯಲಿದೆ. ಅಪರಾಹ್ನ ೧ ಗಂಟೆಗೆ ಆರಂಭಗೊಳ್ಳುವ ಸಮ್ಮೇಳನ ಸಂಜೆ 5 ಗಂಟೆಗೆ ವಿದ್ಯಾರ್ಥಿ ರ‍್ಯಾಲಿಯೊಂದಿಗೆ ಸಮಾಪ್ತಿಗೊಳ್ಳಲಿದೆ. ಕಾರ್ಯಕ್ರಮಗಳಲ್ಲಿ ಎಸ್‌ವೈಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಿಕ್ ಸಖಾಫಿ ಉಪ್ಪಳ ವಲಯ ಸಮಾವೇಶವನ್ನು ಉದ್ಘಾಟಿಸುವರು.  ಮೊಹಮ್ಮದ್ ಅಲಿ ಅಹ್ಸಲಿ ಮುಸೋಡಿ, ಎಸ್‌ಎಸ್‌ಎಫ್ ರಾಜ್ಯ ಕಾರ್ಯದರ್ಶಿ ಟಿ.ಪಿ. ಸೈನುದ್ದೀನ್, ಜಿಲ್ಲಾ ಕಾರ್ಯದರ್ಶಿ ಮನ್ಶಾದ್, ಸಾಹಿದ್, ಫಾರೂಕ್ ಮಾತನಾಡುವರು. ಮಂಜೇಶ್ವರ ವಲಯ ಸಮ್ಮೇಳನದಲ್ಲಿ ಸಂಜೆ ೪ಕ್ಕೆ ವಿದ್ಯಾರ್ಥಿ ರ‍್ಯಾಲಿ ನಡೆಯಲಿದ್ದು, ಕೇರಳ ಮುಸ್ಲಿಂ ಜಮಾಯತ್ ಜಿಲ್ಲಾ ಉಪಾಧ್ಯಕ್ಷ ಮೂಸಲ್ ಮದನಿ ಅಲ್‌ಬಿಶಾರ ಉದ್ಘಾಟಿಸುವರು. ಜಲಾಲುದ್ದೀನ್ ಸಅದಿ ಅಲ್‌ಬುಕಾರಿ, ಎಸ್‌ಎಸ್‌ಎಫ್ ರಾಜ್ಯ ಕಾರ್ಯದರ್ಶಿ ಮುನವ್ವಿರ್ ಅಮಾನಿ, ಜಿಲ್ಲಾ ಕಾರ್ಯದರ್ಶಿ ಖಾದರ್ ಸಖಾಫಿ ಮೊದಲಾದವರು ಮಾತನಾಡುವರು. ಈ ಬಗ್ಗೆ ಕುಂಬಳೆ ಯಲ್ಲಿ ಪದಾಧಿಕಾರಿಗಳು ಸುದ್ಧಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

You cannot copy contents of this page