ಎಸ್‌ಡಿಪಿಐ ಕಾರ್ಯಕರ್ತರ ಮನೆಗೆ ಎನ್‌ಐಎ ದಾಳಿ

ಮಲಪ್ಪುರಂ: ಮಂಜೇರಿಯಲ್ಲಿ ಎಸ್‌ಡಿಪಿಐ ಕಾರ್ಯಕರ್ತರ ಮನೆಗ ಳಿಗೆ ಎನ್‌ಐಎ ದಾಳಿ ನಡೆಸಿದೆ. ಇಂದು ಮುಂಜಾನೆ 3 ಗಂಟೆಗೆ ಎನ್‌ಐಎಯ ಕೊಚ್ಚಿ ಘಟಕದ ಅಧಿಕಾರಿಗಳ ತಂಡ ಈ ದಾಳಿ ನಡೆಸಿದೆ. ಒಂದು ತಾಸಿನ ತನಕ ಈ ಮನೆಗಳಲ್ಲಿ ತಪಾಸಣೆ ಮುಂದುವರಿಸಲಾಯಿತು.

ದಾಳಿಯ ಬೆನ್ನಲ್ಲೇ ಎಸ್‌ಡಿಪಿಐಯ ನಾಲ್ವರು ಕಾರ್ಯಕರ್ತರನ್ನು ಎನ್‌ಐಎ ವಶಕ್ಕೆ ತೆಗೆದುಕೊಂಡಿದೆ. ಶಿಹಾಬ್, ಸೈಯಿದ್ ಅಲವಿ, ಖಾಲಿದ್ ಮತ್ತು ಇರ್ಷಾದ್ ಎಂಬವರನ್ನು ಈ ರೀತಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಇದರ ಹೊರತಾಗಿ ಇನ್ನೋರ್ವನನ್ನೂ ಎನ್‌ಐಎ ಕಸ್ಟಡಿಗೆ ತೆಗೆದುಕೊಂ ಡಿರುವುದಾಗಿ ಹೇಳಲಾಗುತ್ತಿದೆ. ಒಟ್ಟು ಐದು ಮನೆಗಳಿಗೆ ಎನ್‌ಐಎ ದಾಳಿ ನಡೆಸಿತ್ತು.

ಎನ್‌ಐಎ ವಶಕ್ಕೆ ತೆಗೆದುಕೊಂಡಿರುವವರಲ್ಲಿ ಓರ್ವ ಎಸ್‌ಡಿಪಿಐ ಬ್ರಾಂಚ್ ಕಾರ್ಯದರ್ಶಿ ಹಾಗೂ ಇಬ್ಬರು ಅಕ್ಕಸಾಲಿಗರೂ ಆಗಿದ್ದಾರೆಂದು ಹೇಳಲಾಗುತ್ತಿದೆ. ಪಾಲ್ಘಾಟ್‌ನಲ್ಲಿ ಇತ್ತೀಚೆಗೆ ಶ್ರೀನಿವಾಸನ್ ಎಂಬವರ ಕೊಲೆಗೆ ಸಂಬಂಧಿಸಿದ ತನಿಖೆಗೆ ಸಂಬಂಧಿಸಿ ಈ ದಾಳಿ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.

RELATED NEWS

You cannot copy contents of this page