ಏರುತ್ತಿರುವ ಉಷ್ಣಾಂಶ: ರಾಜ್ಯದಲ್ಲಿ ವಿದ್ಯುತ್ ಲೋಡ್ ಶೆಡ್ಡಿಂಗ್ ಇಲ್ಲ, ಬದಲಾಗಿ ನಿಯಂತ್ರಣ

ಕಾಸರಗೋಡು: ರಾಜ್ಯದಲ್ಲಿ ಉಷ್ಣಾಂಶ ಮಟ್ಟ ಏರುತ್ತಿರುವ ಹಿನ್ನೆಲೆಯಲ್ಲಿ ಸದ್ಯ ವಿದ್ಯುತ್ ಲೋಡ್ ಶೆಡ್ಡಿಂಗ್ ಹೇರದಿರುವ ತೀರ್ಮಾನಕ್ಕೆ ವಿದ್ಯುನ್ಮಂಡಳಿ ಬಂದಿದೆ. ಆದರೆ ವಿದ್ಯುತ್ ಬಳಕೆ ದಾಖಲೆ ಮಟ್ಟಕ್ಕೇರತೊಡಗಿರುವ ಹಿನ್ನೆಲೆಯಲ್ಲಿ ವಿದ್ಯುತ್ ನಿಯಂತ್ರಣ ಹೇರುವ ತೀರ್ಮಾನವನ್ನೂ ಇನ್ನೊಂದೆಡೆ ಮಂಡಳಿ ಕೈಗೊಂಡಿದೆ. ಈ ಕುರಿತಾದ ಸರಕಾರದ ಅಧಿಕೃತ ಪ್ರಕಟಣೆ ಇಂದು ಹೊರಬೀಳಲಿದೆ.

ವಿದ್ಯುತ್ ಖಾತೆ ಸಚಿವರ ನೇತೃತ್ವದಲ್ಲಿ ನಡೆದ ವಿದ್ಯುತ್ ಇಲಾಖೆಯ ಉನ್ನತ ಮಟ್ಟದ ಚರ್ಚೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ರಾಜ್ಯದಲ್ಲಿ ಹಲವೆಡೆಗಳಲ್ಲಿ ವಿದ್ಯುತ್ ವೋಲ್ಟೇಜ್ ಕೊರತೆ ಅನುಭವಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅಂತಹ ಪ್ರದೇಶಗಳಲ್ಲಿ ಕೆಲವೊಮ್ಮೆ ಲೋಡ್‌ಶೆಡ್ಡಿಂಗ್ ಹೇರಬೇಕಾಗಿ ಬರುತ್ತಿದೆ. ಈಗ ಅಗತ್ಯದಷ್ಟು ವಿದ್ಯುತ್ ಲಭಿಸುತ್ತಿದ್ದರೂ, ವಿದ್ಯುತ್ ಲೈನ್‌ಗಳ ಧಾರಕಶಕ್ತಿಗಿಂತಲೂ ಅದರಲ್ಲಿ ಹೆಚ್ಚು ವಿದ್ಯುತ್ ಪ್ರವಹಿಸು ವಾಗ ಅದು ವಿದ್ಯುತ್ ಸಮಸ್ಯೆ ತಲೆಯೆತ್ತಲು ಕಾರಣವಾ ಗುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಅಮಿತ ವಿದ್ಯುತ್ ಲೋಡ್ ಉಂಟಾಗುವ ವಲಯಗಳಲ್ಲಿ ವಿದ್ಯುತ್ ಸರಬ ರಾಜು ಪೂರೈಕೆ ನಿಲುಗಡೆಗೊಳಿಸಬೇಕಾಗಿ ಬರುತ್ತಿದೆ. ಇಂತಹ ವೇಳೆಗಳಲ್ಲಿ ವಿದ್ಯುತ್ ಸಬ್ ಸ್ಟೇಷನ್‌ಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಬೇಕಾಗಿ ಬರುತ್ತಿದೆ ಎಂದು ಮಂಡಳಿ ಹೇಳಿದೆ.

ಕಾಸರಗೋಡು, ಕಣ್ಣೂರು, ಪಾಲ್ಘಾಟ್, ಮಲಪ್ಪುರಂ, ಇಡುಕ್ಕಿ ಜಿಲ್ಲೆಗಳಲ್ಲಿ ಇಂತಹ ಹಲವು ಪ್ರದೇಶಗಳಿವೆ. ವಿದ್ಯುತ್ ಬಳಕೆಯಲ್ಲಿ ದೈನಂದಿನ ಶೇ. ೧೦೦ರಿಂದ ೧೫೦ ಮೆಘಾವ್ಯಾಟ್‌ನಷ್ಟು  ಇಳಿಸಬೇಕಾಗಿ ಬರಲಿದೆ. ಇದರಿಂದಾಗಿ ವ್ಯಾಪಾರ ಮತ್ತು ಉದ್ದಿಮೆ ಸಂಸ್ಥೆಗಳಲ್ಲಿ ವಿದ್ಯುತ್ ನಿಯಂತ್ರಣ ಹೇರುವ ತೀರ್ಮಾನವನ್ನು ಸಭೆ ಕೈಗೊಂಡಿದೆ.

Leave a Reply

Your email address will not be published. Required fields are marked *

You cannot copy content of this page