ಏರ್‌ಫೋರ್ಸ್‌ನಲ್ಲಿ ಉದ್ಯೋಗ ಭರವಸೆಯೊಡ್ಡಿ ಹಣ ಲಪಟಾವಣೆ ಆರೋಪಿ ಬಂಧನ

ಕುಂಬಳೆ: ಏರ್‌ಫೋರ್ಸ್ ನಲ್ಲಿ ಉದ್ಯೋಗ ಭರವಸೆಯೊಡ್ಡಿ ಸೀತಾಂಗೋಳಿ ನಿವಾಸಿಯಿಂದ ಒಂದೂವರೆ ಲಕ್ಷ ರೂಪಾಯಿ ಲಪಟಾಯಿಸಿದ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲಾ ಗಿದೆ. ತೊಡುಪುಳ ಮುದಲ ಕೋಡ್ ನಿವಾಸಿ ಪಿ. ಸನೀಶ್ (46) ಎಂಬಾತನನ್ನು ಕುಂಬಳೆ ಪೊಲೀಸರು ಸೆರೆ ಹಿಡಿದಿದ್ದಾರೆ. ಉದ್ಯೋಗದ ಭರವಸೆಯೊಡ್ಡಿ ಈತ ಸೀತಾಂಗೋಳಿ ಬಳಿಯ ಎಡನಾಡು ನಿವಾಸಿ ಯುವಕ ನಿಂದ ಹಣ ಲಪಟಾಯಿಸಿ ರುವುದಾಗಿ ದೂರಲಾಗಿದೆ.

ನಕಲಿ ದಾಖಲೆ ತಯಾರಿ  ಹಾಗೂ ಲಪಟಾವಣೆ ಸಹಿತ ವಿವಿಧ ಆರೋಪಗಳಿಗೆ ಸಂಬಂಧಿಸಿ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಆರೋಪಿ ವಿರುದ್ಧ ಕೇಸು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page