ಒಂದೂವರೆ ಕಿಲೋ ಹೈಬ್ರೀಡ್ ಗಾಂಜಾ ಸಹಿತ ಮುಂಬಯಿ ನಿವಾಸಿಗಳು ಕೊಚ್ಚಿಯಲ್ಲಿ ಸೆರೆ
ಕೊಚ್ಚಿ: ಗಾಂಜಾ ಸಹಿತ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಇಬ್ಬರು ಮಹಿಳೆಯರನ್ನು ಸೆರೆ ಹಿಡಿಯ ಲಾಗಿದೆ. ಬ್ಯಾಂಕಾಕ್‌ನಿಂದ ತಲುಪಿದ ಮುಂಬಯಿ ನಿವಾಸಿಗಳಾದ ಸಬ ರಾಶಿದ್, ಶಾಜಿಯ ಅಮರ್‌ಹಂಸ ಎಂಬಿವರನ್ನು ಬಂಧಿಸಲಾಗಿದೆ. ಇವರಿಂದ ಒಂದೂವರೆ ಕಿಲೋ ಹೈಬ್ರೀಡ್ ಗಾಂಜಾ ವಶಪಡಿಸಲಾಗಿದೆ. ಸಬ ರಾಶಿದ್‌ಳ ಕೈಯಿಂದ 754 ಗ್ರಾಂ ಗಾಂಜಾ, ಅಮರ್ ಹಂಸಳಿಂದ 750 ಗ್ರಾಂ ಗಾಂಜಾವನ್ನು ವಶಪಡಿಸಲಾಗಿದೆ. ನೆಡುಂಬಾಶೇರಿ ವಿಮಾನ ನಿಲ್ದಾಣಕ್ಕೆ ತಲುಪಿದ ಇವರ ವರ್ತನೆಯಲ್ಲಿ ಅಸ್ವಾಭಾವಿಕತೆ ಪ್ರಕಟವಾದ ಹಿನ್ನೆಲೆಯಲ್ಲಿ ನಡೆಸಿದ ತಪಾಸಣೆಯಲ್ಲಿ ಗಾಂಜಾ ಪತ್ತೆಯಾಗಿದೆ. ದೊಡ್ಡ ಪ್ಯಾಕೆಟ್‌ಗಳಲ್ಲಿ ಅಡಗಿಸಿಟ್ಟ ಸ್ಥಿತಿಯಲ್ಲಿ ಇವು ಪತ್ತೆಯಾಗಿವೆ. ಅಂತಾರಾಷ್ಟ್ರೀಯ ಮಾದಕ ಪದಾರ್ಥ ಸಾಗಾಟ ತಂಡದೊಂದಿಗೆ ಇವರಿಗೆ ಸಂಪರ್ಕವಿದೆಯೋ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇದೇ ವೇಳೆ ಕೊಚ್ಚಿಯಲ್ಲಿ ಮತ್ತೊಂದು ಘಟನೆಯಲ್ಲಿ 500 ಗ್ರಾಂ ಎಂಡಿಎಂಎ ವಶಪಡಿಸಲಾಗಿದೆ. ಈ ಪ್ರಕರಣದಲ್ಲಿ ಇಬ್ಬರು ಮಹಿಳೆಯರ ಸಹಿತ 10 ಮಂದಿ ಸೆರೆಯಾಗಿದ್ದಾರೆ. ಮಲಪ್ಪುರಂ ನಿವಾಸಿ ಆಶಿಕ್ ಸೆರೆಯಾದವರಲ್ಲಿ ಸೇರಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಒಮಾನ್‌ನಿಂದ ಮಹಿಳೆಯ ಸಹಾಯದೊಂದಿಗೆ ಎಂಡಿಎಂಎ ಕೊಚ್ಚಿಗೆ ತಲುಪಿಸಲಾಗಿತ್ತು. ತೋಪುಂಪಡಿ ಮಟ್ಟಾಂಚೇರಿ ಎಂಬೆಡೆಗಳಿಂದಾಗಿ 500 ಗ್ರಾಂ ಎಂಡಿಎಂಎ ಪತ್ತೆಹಚ್ಚಲಾಗಿದೆ. ಈ ಪ್ರಕರಣದಲ್ಲಿ ಇದುವರೆಗೆ ೧೦ ಮಂದಿ ಸೆರೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.