ಒಂದೂವರೆ ಟನ್ ತಂಬಾಕು ಉತ್ಪನ್ನ ವಶ

ತಿರುವನಂತಪುರ: ತಿರುವ ನಂತಪುರ ಕರೇಟ್ ಎಂಬಲ್ಲಿ ಬಚ್ಚಿಡಲಾಗಿದ್ದ ಒಂದೂವರೆ ಟನ್ ನಿಷೇಧಿತ ತಂಬಾಕು ಉತ್ಪನ್ನಗಳನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಗೋಡೌನ್ ಒಂದರಲ್ಲಿ 40 ಗೋಣಿ ಚೀಲಗಳಲ್ಲಿ ತಂಬಾಕು ಉತ್ಪನ್ನ ತುಂಬಿಸಿಡಲಾಗಿತ್ತು. ಈ ಸಂಬಂಧ ಸ್ಥಳೀಯ ನಿವಾಸಿಯಾದ ಶಂನಾದ್ ಎಂಬಾತನನ್ನು ಬಂಧಿಸಲಾಗಿದೆ. ಈತ ಗೋಡೌನ್ ಬಾಡಿಗೆಗೆ ಪಡೆದು ಅದರಲ್ಲಿ ತಂಬಾಕು ಉತ್ಪನ್ನ ಬಚ್ಚಿಟ್ಟು ವಿವಿಧೆಡೆಗೆ ಸಾಗಿಸುತ್ತಿದ್ದನೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page