ಒಂದೂವರೆ ತಿಂಗಳ ಹಿಂದೆ ಸ್ಥಾಪಿಸಿದ ಸ್ಟ್ರೀಟ್ ಲೈಟ್ ಬೆಳಗಿಸಲು ಕ್ರಮವಿಲ್ಲ: ಕುಂಬಳೆ ಪೇಟೆ ಅಂಧಕಾರದಲ್ಲಿ
ಕುಂಬಳೆ: ಕುಂಬಳೆ ಪೇಟೆಯಲ್ಲಿ ನೂತನವಾಗಿ ಸ್ಟ್ರೀಟ್ ಲೈಟ್ ಅಳವ ಡಿಸಿ ಒಂದೂವರೆ ತಿಂಗಳಾದರೂ ಅದನ್ನು ಬೆಳಗಿಸಲು ಕ್ರಮ ಉಂಟಾ ಗಿಲ್ಲ. ಇದರಿಂದ ರಾತ್ರಿ ಹೊತ್ತಿನಲ್ಲಿ ಪೇಟೆ ಅಂಧಕಾರದಿಂದ ಮುಳುಗಿರುತ್ತದೆ.ಕುಂಬಳೆ ಸರ್ಕಲ್‌ನಿಂದ ಅನಿಲ್ ಕುಂಬಳೆ ರಸ್ತೆವರೆಗೆ ಸ್ಥಿತಿ ಇದಾಗಿದೆ. ಈ ಪ್ರದೇಶದಲ್ಲಿ ಈ ಹಿಂದೆ ಮೂರು ಹೈಮಾಸ್ಟ್ ಲೈಟ್, ೨ ಮಿನಿ ಮಾಸ್ಟ್ ಲೈಟ್‌ಗಳಲ್ಲದೆ ಸಣ್ಣ ಲೈಟ್‌ಗಳನ್ನು ಮರು ಸ್ಥಾಪಿಸಲಾಗುತ್ತಿದೆ. ಇದು ಬೆಳಗಿ ರಾತ್ರಿ ಪೇಟೆ ಬೆಳಕು ಪ್ರಕಾಶಿಸು ತ್ತಿತ್ತು. ಆದರೆ ರಸ್ತೆ ಅಭಿವೃದ್ಧಿ ಹಿನ್ನೆಲೆ ಯಲ್ಲಿ ಲೈಟ್‌ಗಳನ್ನು ತೆರವುಗೊಳಿಸಿದ ಕೆಎಸ್‌ಟಿಪಿ ಅಧಿಕಾರಿಗಳು ರಸ್ತೆ ಕಾಮಗಾರಿ ಮುಗಿದ ಬಳಿಕ ಹೊಸ ಲೈಟ್‌ಗಳನ್ನು ಸ್ಥಾಪಿಸಿದ್ದಾರೆ. ಲೈಟ್‌ಗಳನ್ನು ಸ್ಥಾಪಿಸಿ ಒಂದೂವರೆ ತಿಂಗಳಾದರೂ ಅದಕ್ಕೆ ವಿದ್ಯುತ್ ಸಂಪರ್ಕ ನೀಡಿಲ್ಲ. ವಿದ್ಯುತ್ ಸಂಪರ್ಕ ದೊರಕಿಸಿಕೊಡುವ ಹೊಣೆಗಾರಿಕೆ ಕೆಎಸ್‌ಟಿಪಿ ಅಧಿಕಾರಿಗಳದ್ದಾಗಿದೆ ಎಂದು ಹೇಳಲಾಗುತ್ತಿದೆ. ಅವರು ಇದಕ್ಕೆ ಮುಂದಾಗದಿರುವುದೇ ಸಮಸ್ಯೆಗೆ ಕಾರಣವಾಗಿದೆ. ಬೀದಿ ದೀಪ ಉರಿಯದಿರುವುದರಿಂದ ರಾತ್ರಿ ಹೊತ್ತಿನಲ್ಲಿ ಪಾದಚಾರಿಗಳು ನಡೆದಾಡಲು ಪರದಾಡಬೇಕಾಗುತ್ತಿದೆ. ವ್ಯಾಪಾರ ಸಂಸ್ಥೆಗಳು ಮುಚ್ಚುಗಡೆಯಾದ ಬಳಿಕ ಈ ಪ್ರದೇಶದಲ್ಲಿ ಬೆಳಕಿಲ್ಲದೆ ಅಂಧಕಾರ ಆವರಿಸುತ್ತಿದೆ. ವಿವಿಧ ಅಗತ್ಯಗಳಿಗಾಗಿ ರಾತ್ರಿ ಹೊತ್ತಿನಲ್ಲಿ ಪೇಟೆಗೆ ಬರುವವರು ಇದೀಗ ತೀವ್ರ ಸಮಸ್ಯೆ ಎದುರಿಸಬೇಕಾಗುತ್ತಿದೆ. ಇದರಿಂದ ಶೀಘ್ರವೇ ಸ್ಟ್ರೀಟ್ ಲೈಟ್ ಉರಿಸಲು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.