ಕಂದಾಯ ಜಿಲ್ಲಾ ಶಾಲಾ ಕಲೋತ್ಸವ ವೇದಿಕೆ ಸ್ಪರ್ಧೆಗಳು ಆರಂಭ
ಹೊಸದುರ್ಗ: ಉದಿನೂರಿನಲ್ಲಿ ನಡೆಯುತ್ತಿರುವ ಕಾಸರಗೋಡು ಕಂದಾಯ ಜಿಲ್ಲಾ ಶಾಲಾ ಕಲೋತ್ಸವದ ವೇದಿಕೆ ಸ್ಪರ್ಧೆಗಳು ಇಂದು ಆರಂಭಗೊಂಡಿತು. ಸಂಜೆ 4 ಗಂಟೆಗೆ ಕಲೋತ್ಸವದ ಔಪಚಾರಿಕ ಉದ್ಘಾಟನೆ ನಡೆಯಲಿದೆ. ಕ್ಷೇಮನಿಧಿ ಮಂಡಳಿ ಅಧ್ಯಕ್ಷ ಕೆ. ಮಧುಪಾಲ್ ಉದ್ಘಾಟಿಸುವರು. ಜಿಲ್ಲಾ ಪಂ. ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸುವರು. ಶಾಸಕರು ಹಾಗೂ ಇತರ ಜನಪ್ರತಿನಿಧಿಗಳು ಭಾಗವಹಿಸುವರು.
ನಿನ್ನೆ ವೇದಿಕೇತರ ಸ್ಪರ್ಧೆಗಳಲ್ಲಿ 77 ಸ್ಪರ್ಧೆಗಳು ಪೂರ್ತಿಗೊಂಡಾಗ ತಲಾ 229 ಅಂಕಗಳೊAದಿಗೆ ಬೇಕಲ ಮತ್ತು ಹೊಸದುರ್ಗ ಶಿಕ್ಷಣ ಉಪಜಿಲ್ಲೆಗಳು ಅಗ್ರಸ್ಥಾನ ಪಡೆದಿವೆ. ಚೆರುವತ್ತೂರು ಉಪಜಿಲ್ಲ್ಲೆ 226 ಮತ್ತು ಕಾಸರಗೋಡು ಉಪಜಿಲ್ಲೆ 220 ಅಂಕ ಪಡೆದಿದೆ.
ಉಳಿದಂತೆ ಕುಂಬಳೆ- 196, ಚಿತ್ತಾರಿಕಲ್- 166 ಮತ್ತು ಮಂಜೇಶ್ವರ -163 ಅಂಕ ಪಡೆದಿವೆ. ಶಾಲಾ ಮಟ್ಟದಲ್ಲಿ ಹೊಸದುರ್ಗ ದುರ್ಗಾ ಹೈಯರ್ ಸೆಕೆಂಡರಿ ಶಾಲೆ 58 ಅಂಕಗಳೊAದಿಗೆ ಒಂದನೇ ಸ್ಥಾನದಲ್ಲಿದೆ. 48 ಅಂಕ ಪಡೆದ ಉದುಮ ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಎರಡನೇ ಸ್ಥಾನದಲ್ಲೂ ಅತಿಥೇಯ ಉದಿನೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆ 41 ಅಂಕಗಳೊAದಿಗೆ ಮೂರನೇ ಸ್ಥಾನದಲ್ಲಿದೆ.
ಕಲೋತ್ಸವವನ್ನು ನಾಳೆ ಸಂಪೂರ್ಣವಾಗಿ ಅಧ್ಯಾಪಿಕೆಯರು ನಿಯಂತ್ರಿಸುವರು. 12 ವೇದಿಕೆಗಳಲ್ಲಾಗಿ 240 ಮಹಿಳೆಯ ಸ್ಪರ್ಧೆಗಳನ್ನು ಆರಂಭದಿAದ ಅಂತ್ಯದವರೆಗೂ ನಿಯಂತ್ರಿಸುವರು. 300 ಅಧ್ಯಾಪಿಕೆಯರು ಏಕವರ್ಣದ ಸೀರೆ ಉಟ್ಟು ಕಲೋತ್ಸವ ನಗರದಲ್ಲಿ ಭಾಗವಹಿಸುವರು. ಸ್ಟೇಜ್ ಮೆನೇಜರ್, ಅನೌನ್ಸರ್, ಟೈಮರ್, ಟ್ಯಾಬುಲೇಶನ್ ಮೊದಲಾದ ಎಲ್ಲಾ ಹೊಣೆಗಳನ್ನು ಅಧ್ಯಾಪಿಕೆಯರು ನಿರ್ವಹಿಸುವರು.
ವೇದಿಕೆ 1ರಲ್ಲಿ ಇಂದು ಭರತನಾಟ್ಯದೊಂದಿಗೆ ಸ್ಪರ್ಧೆ ಆರಂಭಗೊAಡಿದೆ. ಹೈಯರ್ ಸೆಕೆಂಡರಿ ಗಂಡುಮಕ್ಕಳ ಸ್ಪರ್ಧೆ ಪ್ರಥಮ ಸ್ಪರ್ಧೆಯಾಗಿದೆ. ಬಳಿಕ ಹೆಣ್ಮಕ್ಕಳ, ಭರತನಾಟ್ಯ ನಡೆಯಲಿದೆ. ವೇದಿಕೆ ಎರಡರಲ್ಲಿ ಗಂಡುಮಕ್ಕಳ ಹೈಸ್ಕೂಲ್ ಕೂಚುಪುಡಿ ಬಳಿಕ ಹೈಯರ್ ಸೆಕೆಂಡರಿ ಮಕ್ಕಳ ಕೂಚುಪುಡಿ, ಬಳಿಕ ಕೇರಳ ನಟನಂ, ವೇದಿಕೆ ಮೂರರಲ್ಲಿ ಮಾಪ್ಪಿಳ ಪಾಟ್, 4ರಲ್ಲಿ ಗಜಲ್, 5ರಲ್ಲಿ ಸಂಸ್ಕೃತ ಸ್ಪರ್ಧೆ, 6ರಲ್ಲಿ ನಾಟಕ, 7ರಲ್ಲಿ ಮೊನೊ ಆಕ್ಟ್ ಹಾಗೂ ಉಳಿದ ವೇದಿಕೆಗಳಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿದೆ.