ಕಂಬಳಿಹುಳು: ಎಸ್‌ಎಟಿ ಶಾಲಾ ವಿದ್ಯಾರ್ಥಿಗಳಿಗೆ ತುರಿಕೆ

ಮಂಜೇಶ್ವರ: ಶಾಲೆ ಬಳಿಯ ಮರವೊಂದರಲ್ಲಿರುವ ಕಂಬಳಿ ಹುಳುವಿನಿಂದ ವಿದ್ಯಾರ್ಥಿಗಳು ತುರಿಕೆಗೆ ತುತ್ತಾದ ಘಟನೆ ಮಂಜೇಶ್ವರ ಎಸ್‌ಎಟಿ ಶಾಲೆಯಲ್ಲಿ ಜರಗಿದೆ. ಈ ಶಾಲೆಯ ಆವರಣದ ನೆಲ್ಲಿಕಾಯಿ ಮರವೊಂದರಲ್ಲಿ ಅಸಂಖ್ಯಾತ ಕಂಬಳಿ ಹುಳುಗಳು ಕಂಡುಬಂದಿದ್ದು, ಇದ ರಿಂದ ಮಕ್ಕಳಿಗೆ ತುರಿಕೆ ಉಂಟಾಗಿದೆ. ಈ ಬಗ್ಗೆ ಗೊಂದಲ ಉಂಟಾದಾಗ ಆರೋಗ್ಯ ಅಧಿಕಾರಿಗಳು ತಲುಪಿ ತಪಾಸಣೆ ನಡೆಸಿದ್ದಾರೆ.  ಇದರಿಂದಾಗಿ ತುರಿಕೆಗೆ ಕಾರಣ ಕಂಬಳಿ ಹುಳುವೆಂದು  ಪತ್ತೆ ಹಚ್ಚಿದ್ದಾರೆ.

ಆರಂಭದಲ್ಲಿ  ತುರಿಕೆ ಉಂಟಾದ ಮಕ್ಕಳಿಗೆ ರಜೆ ನೀಡಲಾಗಿತ್ತು. ಆದರೆ ಅದಕ್ಕೆ ಕಾರಣ ಪತ್ತೆಹಚ್ಚಲು ಮುಂದಾಗಲಿಲ್ಲವೆಂದು ಪೋಷಕರು ದೂರಿದ್ದಾರೆ. ಬಳಿಕ ಆರೋಗ್ಯ ಇಲಾಖೆ ಅಧಿಕಾರಿಗಳು ತಲುಪಿ ತಪಾಸಣೆ ನಡೆಸಿದಾಗ ಕಂಬಳಿ ಹುಳು ಪತ್ತೆಯಾಗಿದೆ.  ಔಷಧಿ ಸಿಂಪಡಿಸಿ ಕಂಬಳಿ ಹುಳುವನ್ನು ನಾಶಮಾಡಲು ಆರೋಗ್ಯ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ.

RELATED NEWS

You cannot copy contents of this page