ಕಣ್ಣೂರಿನ ಸಹಪಾಠಿಯ ಮನೆಗೆ ಬಂದ ಸುಳ್ಯ ನಿವಾಸಿ ವಿದ್ಯಾರ್ಥಿ ಕೆರೆಯಲ್ಲಿ ಮುಳುಗಿಸಾವು
ಕಾಸರಗೋಡು: ಕಣ್ಣೂರಿನಲ್ಲಿ ರುವ ಸಹಪಾಠಿಯ ಮನೆಗೆ ಬಂದ ಸುಳ್ಯ ನಿವಾಸಿ ವಿದ್ಯಾರ್ಥಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ಸುಳ್ಯ ನಿವಾಸಿಯೂ ಮಂಗಳೂರು ದೇರಳಕಟ್ಟೆ ಎ.ಬಿ. ಶೆಟ್ಟಿ ಕಾಲೇಜಿನ ಪ್ರಥಮ ವರ್ಷದ ಬಿಡಿಎಸ್ ವಿದ್ಯಾರ್ಥಿ ಅಸ್ತಿಕ್ ರಾಘವ್ (19) ಮೃತಪಟ್ಟ ದುರ್ದೈವಿಯಾಗಿದ್ದಾನೆ. ಈತ ಕಣ್ಣೂರು ಬಳಿಯ ಕೊಟ್ಟೋಳಿ ಎಂಬಲ್ಲಿರುವ ಸಹಪಾಠಿಯ ಮನೆಗೆ ಬಂದಿದ್ದನು. ಇಲ್ಲಿನ ಕೆರೆಯೊಂದರಲ್ಲಿ ಇತರರೊಂದಿಗೆ ಈಜಲು ಇಳಿದಿದ್ದು, ಈ ವೇಳೆ ಅಸ್ತಿಕ್ ನೀರಿನಲ್ಲಿ ಮುಳುಗಿದ್ದಾನೆನ್ನಲಾಗಿದೆ. ವಿಷಯ ತಿಳಿದು ಅಗ್ನಿಶಾಮಕದಳ ಹಾಗೂ ಪೊಲೀಸರು ಅಸ್ತಿಕ್‌ನನ್ನು ಕೆರೆಯಿಂದ ಮೇಲೆತ್ತಿ ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.
ಸುಳ್ಯ ತಾಲೂಕು ನಿವೃತ್ತ ಆರೋಗ್ಯಾಧಿಕಾರಿ ಡಾ| ನಂದಕುಮಾರ್-ಮಂಜುಳ ದಂಪತಿ ಪುತ್ರನಾದ ಮೃತನು ಸಹೋದರಿ ಆಸ್ಮಿಕ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ. ಮೃತದೇಹವನ್ನು ಇಂದು ಊರಿಗೆ ಕೊಂಡೊಯ್ಯಲಾಗುವುದು.