ಕನಿಯಾಲ-ಧರ್ಮತ್ತಡ್ಕ ಮಧ್ಯೆ ಅಪಘಾತ ಕೇಂದ್ರ : ನಿಯಂತ್ರಣ ತಪ್ಪಿ ವಾಲಿ ನಿಂತ ಮೇಳದ ಬಸ್

ಬಾಯಾರು: ಧರ್ಮತ್ತಡ್ಕ-ಕನಿ ಯಾಲ ಮಧ್ಯೆಗಿನ ಇಳಿಜಾರು ತಿರುವಿನಲ್ಲಿ ಬಸ್ಸೊಂದು  ಅಪಘಾತಕ್ಕೀಡಾಗಿದೆ.  ಆದರೆ ಪ್ರಯಾಣಿಕರು ಗಾಯಗಳಿಲ್ಲದೆ ಪಾರಾಗಿದ್ದಾರೆ. ಯಕ್ಷಗಾನ ಮೇಳ ವೊಂದರ ಬಸ್ ಧರ್ಮತ್ತಡ್ಕ ದಿಂದ ಬಾಯಾರು  ಭಾಗಕ್ಕೆ ತೆರಳುತ್ತಿದ್ದಾಗ ಇಲ್ಲಿ ನಿಯಂತ್ರಣ ತಪ್ಪಿ  ರಸ್ತೆ ಬದಿಗೆ ವಾಲಿ ನಿಂತಿದೆ. ಅಗಲಕಿರಿದಾಗಿ ಇಕ್ಕಟ್ಟಾಗಿರುವ ರಸ್ತೆಯಲ್ಲಿ ತಿರುವು ಇದ್ದು, ಎದುರಿನಿಂದ ಬರುವ ವಾಹನಗಳಿಗೆ ಸಾಗಲು ಅಸಾಧ್ಯವಾಗುತ್ತಿದೆ. ರಸ್ತೆ ಬದಿಯಲ್ಲಿ ಆಳವಾದ ಇಳಿಜಾರು ಆಗಿದ್ದು, ಅಕಸ್ಮಾತ್ ರಸ್ತೆಯಿಂದ ತಪ್ಪಿದರೆ ದುರಂತ ಕಟ್ಟಿಟ್ಟ ಬುತ್ತಿ. ಇಲ್ಲಿ ನಿರಂತರ ಅಪಘಾತ ಸಂಭವಿಸುತ್ತಿದೆ. ಎರಡು ವಾರಗಳ ಹಿಂದೆ ಕರ್ನಾಟಕಕ್ಕೆ ಕಲ್ಲು ಸಾಗಿಸುತ್ತಿದ್ದ ಲಾರಿ ಮಗುಚಿದೆ. ಮೂರು ತಿಂಗಳ  ಹಿಂದೆಯೂ ಇದೇ   ರೀತಿ ಲಾರಿ ಮಗುಚಿದೆ.  ಒಂದು ವರ್ಷದ ಹಿಂದೆ ಇಲ್ಲಿ ಪಿಕಪ್‌ವೊಂದು ಪಲ್ಟಿಯಾಗಿದೆ. ಈ ರೀತಿ ನಿರಂತರ ಅಪಘಾತ ಸಂಭವಿಸುವ ಈ ರಸ್ತೆಯಲ್ಲಿ ಅಪಾಯ ಕರೆಗಂಟೆಯನ್ನು ತಪ್ಪಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

RELATED NEWS

You cannot copy contents of this page