ಕನ್ನಟಿಕಾನ: ಪಿಕೆಎಸ್‌ನಿಂದ ಹಗ್ಗಜಗ್ಗಾಟ ಸ್ಪರ್ಧೆ

ಪೆರ್ಲ: ಪರಿಶಿಷ್ಟ ಜಾತಿ ಕ್ಷೇಮ ಸಮಿತಿ ಎಣ್ಮಕಜೆ ಪಂಚಾಯತ್ ಸಮಿತಿ ಆಶ್ರಯದಲ್ಲಿ ಈ ತಿಂಗಳ ೨೬ರಂದು ಹಗ್ಗಜಗ್ಗಾಟ ಸ್ಪರ್ಧೆ ನಡೆಯಲಿದೆ. ಅಂದು ಬೆಳಿಗ್ಗೆ ೧೦ಕ್ಕೆ ಕನ್ನಟಿಕಾನ ಸೆಟ್ಟಿಬೈಲು ಎಸ್‌ಸಿ ಕಾಲನಿಯಲ್ಲಿ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳು, ಹಿರಿಯರಿಗೆ, ವಿದ್ಯಾರ್ಥಿಗಳಿಗೆ ಸನ್ಮಾನ ನಡೆಯಲಿದೆ. ಸಂಜೆ ೬ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಪಿಕೆಎಸ್ ರಾಜ್ಯ ಸಮಿತಿ ಅಧ್ಯಕ್ಷ ವಂಡಿತಾಡ ಮಧು ಉದ್ಘಾಟಿಸುವರು. ಪಿಕೆಎಸ್ ಎಣ್ಮಕಜೆ ಪಂ. ಸಮಿತಿ ಅಧ್ಯಕ್ಷ ವಿಠಲ ಅಧ್ಯಕ್ಷತೆ ವಹಿಸುವರು. ಹಲವರು ಭಾಗವಹಿಸುವರು.

You cannot copy contents of this page