ಕನ್ನಡದ ಹುಡುಗಿ ಕಥಕ್ಕಳಿ ಸಂಗೀತದಲ್ಲಿ ರಾಜ್ಯಮಟ್ಟಕ್ಕೆ

ಮಂಜೇಶ್ವರ: ಕಾಸರಗೋಡು ಜಿಲ್ಲಾ ಮಟ್ಟದ ಶಾಲಾ ಕಲೋತ್ಸವ ಉದಿನೂರು ಶಾಲೆಯಲ್ಲಿ ಜರಗಿದ್ದು ಪ್ರೌಢ ಶಾಲಾ ವಿಭಾಗದ ಕಥಕ್ಕಳಿ ಸಂಗೀತದಲ್ಲಿ ಮಂಜೇಶ್ವರದ ಶ್ರೀಮದ್ ಅನಂತೇಶ್ವರ ದೇವಳದ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ದಿಶಾ ರವಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ.
ಮಾತೃಭಾಷೆ ತುಳು ಆಗಿದ್ದು ಮಲಯಾಳಂನ ಕಥಕ್ಕಳಿ ಸಂಗೀತದಲ್ಲಿ ಪ್ರಥಮ ಸ್ಥಾನವನ್ನು ಅಲಂಕರಿಸಿರುವುದು ಸಾಧನೆಯಾ ಗಿದೆ. ಇವಳು ಕಡಂಬಾರಿನ ರವಿ – ಪ್ರೇಮಲತಾ ದಂಪತಿಯ ಪುತ್ರಿಯಾಗಿದ್ದಾಳೆ.

You cannot copy contents of this page