ಕಯ್ಯಾರು ಕ್ರಿಸ್ತರಾಜ ಇಗರ್ಜಿ ಮೈದಾನದಲ್ಲಿ ಸಾಂಸ್ಕೃತಿಕ ಕಲೋತ್ಸವ 11ರಿಂದ

ಪೈವಳಿಕೆ: ಇಂಡಿಯನ್ ಕೆಥೋಲಿಕ್ ಯೂತ್ ಮೂವ್ ಮೆಂಟ್ (ಐಸಿವೈಎಂ) ಕಾಸರಗೋಡು ಹಾಗೂ ಕ್ರೈಸ್ತ್ ಕಿಂಗ್ ಯೂತ್ ಮೂವ್‌ಮೆಂಟ್ ಕಯ್ಯಾರು ಘಟಕದ ಸಹಯೋಗದಲ್ಲಿ ಸಾಂಸ್ಕೃತಿಕ ಹಬ್ಬ ಕಲೋತ್ಸವ ಈ ತಿಂಗಳ 11, 12ರಂದು ಕಯ್ಯಾರು ಕ್ರಿಸ್ತರಾಜ ಇಗರ್ಜಿ ಮೈದಾನದಲ್ಲಿ ನಡೆಯಲಿದೆ. ವಿವಿಧ ಸ್ಪರ್ಧೆಗಳು, ನೃತ್ಯ, ಮನೋರಂಜನೆ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ. 11ರಂದು ಮಂಗಳೂರು ಧರ್ಮ ಪ್ರಾಂತ್ಯದ ಐಸಿವೈಎಂ ನಿರ್ದೇಶಕ ಫಾದರ್ ಅಶ್ವಿನ್ ಲೋಹಿತ್ ಕಾರ್ಡೋಜ ಅಧ್ಯಕ್ಷತೆ ವಹಿಸುವರು.  ವಾಲ್ಟರ್ ನಂದಳಿಕೆ, ಚಿತ್ರನಟಿ ವೆನ್ಸಿಟಾ ಡಯಾಸ್, ಕುಂಬಳೆ ಸಿಐ ವಿನೋದ್ ಕುಮಾರ್, ಡಾ. ಮೆಲ್ವಿನ್ ಪೆರ್ನಾಲ್ ಉಪಸ್ಥಿತರಿರುವರು. 12ರಂದು ಸಮಾರೋಪ ಸಮಾರಂಭ ನಡೆಯಲಿದೆ.

You cannot copy contents of this page