ಕುಂಬಳೆ: ಅನಧಿಕೃತವಾಗಿ ಕರ್ನಾಟಕ ಮದ್ಯ ತಂದು ಮಾರಾಟಕ್ಕೆ ಯತ್ನಿಸುತ್ತಿದ್ದ ಓರ್ವನನ್ನು ಅಬಕಾರಿ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ.
ಕುಬಣೂರು ಪಾಂಡಿ ಬಯಲು ನಿವಾಸಿ ರಮೇಶ್ ಪೂಜಾರಿ (48) ಬಂಧಿತ ವ್ಯಕ್ತಿ. ಈತನನ್ನು ಕುಂಬಳೆ ರೇಂಜ್ ಅಬಕಾರಿ ಅಧಿಕಾರಿಗಳು ಬಂಧಿಸಿ 17.64 ಲೀಟರ್ ಕರ್ನಾಟಕ ಮದ್ಯ ವಶಪಡಿಸಿಕೊಂಡಿ ದ್ದಾರೆ. ಎಕ್ಸೈಸ್ ಇನ್ಸ್‌ಪೆಕ್ಟರ್ ಕೆ.ಡಿ. ಮ್ಯಾಥ್ಯುರ ನೇತೃತ್ವದಲ್ಲಿ ಅಧಿಕಾರಿಗಳಾದ ಕೆ.ಪಿ. ಮನೋಜ್, ಎಂ.ಎಂ. ಅಖಿಲೇಶ್, ಚಾಲಕ ಪ್ರವೀಣ್ ಎಂಬಿವರನ್ನೊಳಗೊಂಡ ತಂಡ ನಿನ್ನೆ ಸಂಜೆ ನಡೆಸಿದ ಕಾರ್ಯಾಚರಣೆ ವೇಳೆ ಮದ್ಯ ವಶಪಡಿಸಲಾಗಿದೆ.