ಕರ್ನಾಟಕ ಮಾಜಿ ಡಿಜಿಪಿ ಕೊಲೆ: ಪತ್ನಿ ಪೊಲೀಸ್ ಕಸ್ಟಡಿಗೆ
ಬೆಂಗಳೂರು: ಕರ್ನಾಟಕದ ಮಾಜಿ ಡಿಜಿಪಿ ಓಂಪ್ರಕಾಶ್ (68) ಎಚ್ಎಸ್ ಆರ್ ಲೇಔಟ್ನಲ್ಲಿರುವ ವಸತಿಯಲ್ಲಿ ಇರಿತದಿಂದ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಪತ್ನಿ ಪಲ್ಲವಿ, ಪುತ್ರಿಯನ್ನು ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ. ಕುಟುಂಬದೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಐಪಿಎಸ್ ಅಧಿಕಾರಿಯ ಪತ್ನಿಗೆ ಫೋನ್ನಲ್ಲಿ ಕರೆದು ತಾನು ಪ್ರಕಾಶ್ರನ್ನು ಕೊಲೆಗೈದಿರುವುದಾಗಿ ಪಲ್ಲವಿ ತಿಳಿಸಿದಳು. ಇವರು ಪೊಲೀಸರಿಗೆ ಮಾಹಿತಿ ನೀಡಿ ದರು. ಮೂರು ಮಹಡಿಯ ವಸತಿಗೃಹದ ನೆಲ ಅಂತಸ್ತಿನಲ್ಲಿ ಮೃತದೇಹ ಕಂಡು ಬಂದಿದೆ. ಹಲವು ಕಾಲದಿಂದ ಡಿಜಿಪಿ ಹಾಗೂ ಪತ್ನಿ ಮಧ್ಯೆ ವೈಮನಸ್ಸು ಉಂಟಾ ಗಿತ್ತು. ಪತಿ ತನ್ನನ್ನು ಕೊಲ್ಲಲು ಯತ್ನಿಸುತ್ತಿರು ವುದಾಗಿ ಹಲವು ಸಂದರ್ಭ ಗಳಲ್ಲಿ ಓಂಪ್ರಕಾಶ್ರ ಸಹೋದ್ಯೋಗಿ ಗಳೊಂದಿಗೆ ಪಲ್ಲವಿ ದೂರಿದ್ದಳು. ಈ ಮಧ್ಯೆ ಓಂಪ್ರಕಾಶ್ರ ಮೃತದೇಹ ಪತ್ತೆಹಚ್ಚಿದ ಕೊಠಡಿಯ ನೆಲದಲ್ಲಿ ರಕ್ತ ಮಡುಗಟ್ಟಿದ ಸ್ಥಿತಿಯಲ್ಲಿ ಇತ್ತೆಂದು ಪೊಲೀಸರು ತಿಳಿಸಿದ್ದಾರೆ.