ಕಾಂಗ್ರೆಸ್ನಿಂದ ತಾಲೂಕು ಕಚೇರಿ ಮುಂದೆ ಧರಣಿ ಮುಷ್ಕರ
ಕಾಸರಗೋಡು: ರೇಶನ್ ಅಂಗಡಿ ಗಳಲ್ಲಿ ಅವಶ್ಯಕ ಸಾಮಗ್ರಿಗಳು ಸರಿಯಾಗಿ ಪೂರೈಸದೇ ಇರುವ ರಾಜ್ಯ ಸರಕಾರದ ನಿಲುವನ್ನು ಪ್ರತಿಭಟಿಸಿ ಇಂದು ಬೆಳಿಗ್ಗೆ ಕಾಸರ ಗೋಡು, ಮಂಜೇಶ್ವರ, ಹೊಸದುರ್ಗ ಮತ್ತು ವೆಳ್ಳರಿಕುಂಡ್ ತಾಲೂ ಕು ಸಪ್ಲೈ ಕಚೇರಿಗಳಿಗೆ ಕಾಂಗ್ರೆಸ್ನ ಆಯಾ ಬ್ಲೋಕ್ ಸಮಿತಿಗಳ ನೇತೃತ್ವ ದಲ್ಲಿ ಮಾರ್ಚ್ ಮತ್ತು ಧರಣಿ ಮುಷ್ಕರ ಹೂಡಲಾಯಿತು. ಇದರಂತೆ ಕಾಸರಗೋಡು ತಾಲೂಕು ಸಪ್ಲೈ ಕಚೇರಿ ಮುಂದೆ ನಡೆದ ಧರಣಿ ಮುಷ್ಕರವನ್ನು ಕೆಪಿಸಿಸಿ ಕಾರ್ಯದರ್ಶಿ ಕೆ. ನೀಲಕಂಠನ್ ಉದ್ಘಾಟಿಸಿದರು. ಮಂಜೇಶ್ವರದಲ್ಲಿ ಹಕೀಂ ಕುನ್ನಿಲ್, ಹೊಸದುರ್ಗದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪಿ.ಕೆ. ಫೈಸಲ್ ಮತ್ತು ವೆಳ್ಳರಿಕುಂಡ್ನಲ್ಲಿ ಯುಡಿಎಫ್ ಜಿಲ್ಲಾ ಸಂಚಾಲಕ ಎ. ಗೋವಿಂದನ್ ನಾಯರ್ ಧರಣಿ ಮುಷ್ಕರ ಉದ್ಘಾಟಿಸಿದರು.