ಕಾಞಂಗಾಡ್ ನಗರಸಭಾ ಅಧ್ಯಕ್ಷರನ್ನು ಕೊಲೆಗೈಯ್ಯಲೆತ್ನಿಸಿದ ಪ್ರಕರಣ: ಮಾವೋವಾದಿ ನಾಯಕನನ್ನು ಮತ್ತೆ ನ್ಯಾಯಾಲಯದಲ್ಲಿ ಹಾಜರುಪಡಿಸಿದ ಪೊಲೀಸರು

ಕಾಸರಗೋಡು: ಹೊಸದುರ್ಗ ನಗರಸಭಾ  ಅಧ್ಯಕ್ಷರಾಗಿದ್ದ ಎನ್.ಎ. ಖಾಲೀದ್‌ರನ್ನು ನಗರಸಭಾ ಕಚೇರಿ ಯಲ್ಲೇ ಕೊಲೆಗೈಯ್ಯಲೆತ್ನಿಸಿದ ಪ್ರಕರಣದ ಆರೋಪಿಯಾಗಿರುವ ಮಾವೋವಾದಿ ನಾಯಕ ಸೋಮನ್ ನನ್ನು ವಿಚಾರಣಾ ನ್ಯಾಯಾಲ ಯವಾದ  ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದಲ್ಲಿ ಪೊಲೀಸರು ನಿನ್ನೆ ಮತ್ತೆ ಹಾಜರುಪಡಿಸಿದ್ದಾರೆ.

 ಆರೋಪಿ ಸೋಮನ್ ವಿರುದ್ಧ ಪೊಲೀಸರು ತಯಾರಿಸಿ ಸಲ್ಲಿಸಿರುವ ಚಾರ್ಜ್ ಶೀಟ್‌ನ್ನು  ನ್ಯಾಯಾಲ ಯದಲ್ಲಿ ಆತನಿಗೆ ಓದಿ ತಿಳಿಸಲಾ ಯಿತು. ನಂತರ ಆತನನ್ನು ಮತ್ತೆ ಜೈಲಿಗೆ ಕರೆದೊಯ್ಯಲಾಯಿತು. ಮಾತ್ರವಲ್ಲ ಈ ಪ್ರಕರಣದ ಮುಂದಿನ ಪರಿಗಣನೆಯನ್ನು ನ್ಯಾಯಾಲಯ ನ. ೨೬ಕ್ಕೆ ಮುಂದೂಡಿದೆ.

ಮಾವೋವಾದಿ ನಾಯಕ ವಿಕ್ರಂಗೌಡ, ಉಡುಪಿಯಲ್ಲಿ ನಕ್ಸಲ್ ನಿಗ್ರಹದಳದ ಎನ್‌ಕೌಂಟರ್‌ನಿಂದ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಸೋಮನ್ ನನ್ನು ಬಿಗಿ ಪೊಲೀಸ್  ಭದ್ರತೆ ಯೊಂದಿಗೆ ಪೊಲೀಸರು ಜೈಲಿನಿಂದ ತಂದು ನ್ಯಾಯಾಲ ಯದಲ್ಲಿ ಹಾಜರುಪಡಿಸಿದ್ದಾರೆ.

ವಿಕ್ರಂ ಗೌಡನ ಹತ್ಯೆ ವಿಷಯ ಸೋಮನ್‌ಗೆ ತಿಳಿದಿಲ್ಲವೆನ್ನಲಾಗಿದೆ. ಆ ವಿಷಯವನ್ನು ಪೊಲೀಸರು ಹಾಗೂ ಜೈಲು ಅಧಿಕಾರಿಗಳು ಸೋಮನ್‌ನಿಂದ ಮರೆಮಾಚಿ ದ್ದಾರೆಂದು ಹೇಳಲಾಗುತ್ತಿದೆ.

೨೦೦೭ರಲ್ಲಿ ಅಂದು ಹೊಸದು ರ್ಗ ನಗರಸಭಾ ಅಧ್ಯಕ್ಷರಾಗಿದ್ದ ಎನ್.ಎ. ಖಾಲೀದ್‌ರನ್ನು   ಸೋಮನ್ ನೇತೃತ್ವದ ಮಾವೋವಾದಿಗಳು ಅಕ್ರಮವಾಗಿ  ನಗರಸಭಾ ಕಚೇರಿಗೆ ನುಗ್ಗಿ ಅವರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಅವರ ಮೇಲೆ ದಾಳಿ ನಡೆಸಿದ್ದರು. ಅದಕ್ಕೆ ಸಂಬಂಧಿಸಿ ಒಟ್ಟು ೧೦ ಮಂದಿ ಮಾವೋವಾದಿ ಕಾರ್ಯಕರ್ತರ ವಿರುದ್ಧ ಹೊಸದುರ್ಗ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ೯ ಆರೋಪಿಗಳ ಮೇಲಿನ ಆರೋಪ ವಿಚಾರಣೆಯಲ್ಲಿ ಸಾಬೀತುಗೊಳ್ಳದ ಹಿನ್ನೆಲೆಯಲ್ಲಿ ವಿಚಾರಣಾ ನ್ಯಾಯಾಲಯ ಅವರನ್ನು ಈ ಹಿಂದೆ ಖುಲಾಸೆಗೊಳಿಸಿ ತೀರ್ಪು ನೀಡಿತ್ತು. ಸೋಮನ್ ವಿರುದ್ಧದ ಕೇಸು ಮಾತ್ರವೇ ಈಗ ವಿಚಾರಣೆಗೆ ಬಾಕಿ ಉಳಿದುಕೊಂಡಿದೆ.

ಸೋಮನ್‌ನನ್ನು ೨೦೨೪ ಜುಲೈ ೨೮ರಂದು ಶೊರ್ನೂರು ರೈಲು ನಿಲ್ದಾಣ ಪರಿಸರದಿಂದ ಕೇರಳ ಪೊಲೀಸ್ ವಿಭಾಗದ ತಂಡರ್ ಬೋಲ್ಟ್ ತಂಡ ಹಾಗೂ ನಕ್ಸಲ್ ನಿಗ್ರಹದಳ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿಸಿತ್ತು. ಸೋಮನ್ ವಿರುದ್ಧ ಕಾಸರಗೋಡು ಮಾತ್ರವಲ್ಲದೆ ವಯನಾಡು, ಕಣ್ಣೂರು, ಕಲ್ಲಿಕೋಟೆ, ಮಲಪ್ಪುರಂ ಮತ್ತು ಪಾಲಕ್ಕಾಡ್ ಜಿಲ್ಲೆಗಳಲ್ಲೂ ಹಲವು ಪ್ರಕರಣಗಳು ದಾಖಲುಗೊಂಡಿವೆ.

Leave a Reply

Your email address will not be published. Required fields are marked *

You cannot copy content of this page