ಕಾಡುಕೋಣದ ದಾಳಿಯಿಂದ ವೃದ್ಧ ಗಂಭೀರ

ಅಡೂರು: ಜಿಲ್ಲೆಯಲ್ಲಿ ಕಾಡುಕೋಣದ ಉಪಟಳ ಮತ್ತೆ ತಲೆಯೆತ್ತಿದೆ. ಅಡೂರಿಗೆ ಸಮೀಪ ಕಾಡುಕೋಣದ ದಾಳಿಗೆ ವೃದ್ಧರೋ ರ್ವರು ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಪಳ್ಳಂಜಿ ಬಳಾಂಕಯ ನಿವಾಸಿ   ಕುಂಞಿರಾಮನ್ (75) ಗಾಯಗೊಂಡ ವ್ಯಕ್ತಿ. ನಿನ್ನೆ ಬೆಳಿಗ್ಗೆ ಘಟನೆ ನಡೆದಿದೆ. ಇವರು ಅಂಗಡಿಯಿಂದ ಸಾಮಾಗ್ರಿ ಖರೀದಿಸಿ ಮನೆಗೆ ಹಿಂತಿರುಗುತ್ತಿದ್ದ ದಾರಿ ಮಧ್ಯೆ  ವ್ಯಕ್ತಿಯೋರ್ವರ ತೋಟದಿಂದ ಕಾಡುಕೋಣ ದಿಢೀರ್ ಆಗಿ ನುಗ್ಗಿ ಬಂದು ದಾಳಿ ನಡೆಸಿದೆ.

ಇದರಿಂದ ಬೆನ್ನುಮೂಳೆ, ಕೈಗಳಿಗೆ ಗಂಭೀರ ಗಾಯಗೊಂಡಿದ್ದ ಅವರು ಮನೆಗೆ ಬಂದು  ನಡೆದ ವಿಷಯವನ್ನು  ಮನೆಯವರಲ್ಲಿ ತಿಳಿಸಿದ್ದಾರೆ.  ತಕ್ಷಣ ಆಂಬುಲೆನ್ಸ್‌ನಲ್ಲಿ ಚೆರ್ಕಳದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕಾಡುಕೋಣ ದಾಳಿ ನಡೆಸಿದ ಪ್ರದೇಶ ಅರಣ್ಯ ಗಡಿ ಪ್ರದೇಶವಾಗಿದ್ದು, ಅಲ್ಲಿ ಕಾಡುಕೋಣ ಮಾತ್ರವಲ್ಲದೆ ಕಾಡಾನೆಗಳು, ಕಾಡುಹಂದಿ ಮೊದಲಾದ ವನ್ಯ ಜೀವಿಗಳ ಉಪಟಳ ಇತ್ತೀಚೆಗಿನಿಂದ ಹೆಚ್ಚಾಗತೊಡಗಿದೆ ಎಂದು ಊರವರು ಹೇಳುತ್ತಿದ್ದಾರೆ. ಹಗಲು ವೇಳೆಯಲ್ಲೂ ಇಲ್ಲಿ ವನ್ಯ ಜೀವಿಗಳು ದಾಳಿ  ನಡೆಸುತ್ತಿವೆಯೆಂದೂ ಸ್ಥಳೀಯರು ಹೇಳುತ್ತಿದ್ದಾರೆ.

You cannot copy contents of this page