ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್‌ಫೆಯರ್  ಸಹಕಾರಿ ಸಂಘ ವಾರ್ಷಿಕ ಮಹಾಸಭೆ

ಮುಳ್ಳೇರಿಯ: ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್‌ಫೆಯರ್ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಕರ್ಮಂತೋಡಿಯಲ್ಲಿ ಜರಗಿದ್ದು, ಕಾರಡ್ಕ ಬ್ಲೋಕ್ ಪಂ. ಅಧ್ಯಕ್ಷ ಸಿಜಿ ಮ್ಯಾಥ್ಯು ಉದ್ಘಾಟಿಸಿದರು. ಕಾಡಗಂ ಸೇವಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಕೆ. ಶಂಕರನ್, ಪಂ. ಸದಸ್ಯರಾದ ಎಂ. ತಂಬಾನ್, ಪ್ರಸೀಜ, ಸತ್ಯವತಿ, ಮಾಜಿ ಅಧ್ಯಕ್ಷರಾದ ವಿ. ಕುಂಞಿರಾಮನ್ ನಾಯರ್, ಪಿ. ಚಂದ್ರನಾಯರ್ ಆಡಳಿತ ಸಮಿತಿ ಸದಸ್ಯರು ಮಾತನಾಡಿದರು. ಅಪಘಾತಕ್ಕೀಡಾಗಿ ಚಿಕಿತ್ಸೆಯಲ್ಲಿರುವ ಅಶ್ರಫ್‌ರ ಚಿಕಿತ್ಸೆಗಾಗಿ ಆಡಳಿತ ಸಮಿತಿ, ನೌಕರರ ಸಹಾಯಧನವನ್ನು ಚಿಕಿತ್ಸಾ ಸಮಿತಿ ಅಧ್ಯಕ್ಷ ಸಿಜಿ ಮ್ಯಾಥ್ಯುರಿಗೆ ಹಸ್ತಾಂತರಿಸಲಾಯಿತು. ಅಧ್ಯಕ್ಷ ಸೂಫಿ ಕಿನ್ನಿಂಗಾರ್ ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ಕೆ. ರತೀಶನ್ ಚಟುವಟಿಕಾ ವರದಿ, ಹರಿಹರನ್ ಸಿ.ಕೆ. ಆಯ-ವ್ಯಯ ಲೆಕ್ಕ ಮಂಡಿಸಿದರು. ಪರೀಕ್ಷೆಯಲ್ಲಿ ಉನ್ನತ ಅಂಕ ಗಳಿಸಿದ ಶಬರೀನಾಥ್ ಪಿ, ಶ್ರೀಲಕ್ಷ್ಮಿ ಇ, ಅನನ್ಯ ಕೆ, ಧನುಷ್ ಎಂ, ಆರ್ಯ ಪಿ, ದೇವದತ್ತನ್ ಎಂ, ದಿಲ್ಶ ಸಿಜಿ, ಅಭಿನವ್ ವಿ, ಶಮನ್ ಕೃಷ್ಣನ್ ಎಂ, ನಿಖಿಲ್ ಎ, ಜೋತಿಕಾ ಪಿ.ಎಸ್. ಎಂಬವರಿಗೆ ನಗದು ನೀಡಿ ಪುರಸ್ಕರಿಸಲಾಯಿತು. ನಿರ್ದೇಶಕ ಚಂದುನಾಯರ್ ಸ್ವಾಗತಿಸಿ, ಶ್ರೀಜಾ ಎಂ. ವಂದಿಸಿದರು. ಇಬ್ರಾಹಿಂ ಕೆ. ಸಂಸ್ಮರಣೆ ನಡೆಸಿದರು.

You cannot copy contents of this page