ಕಾರಡ್ಕ ಪ್ರೀ ಮೆಟ್ರಿಕ್ ಹಾಸ್ಟೆಲ್‌ನ ಅಡುಗೆಯಾಳು ಕುಸಿದು ಬಿದ್ದು ನಿಧನ
ಬದಿಯಡ್ಕ: ಕಾರಡ್ಕ ಪ್ರೀ ಮೆಟ್ರಿಕ್ ಹಾಸ್ಟೆಲ್‌ನ ಅಡುಗೆ ಯಾಳು ಆಗಿ ಕೆಲಸ ನಿರ್ವಹಿಸುತ್ತಿದ್ದ ಪಳ್ಳತ್ತಡ್ಕ ಬಳಿಯ ಬೈಕುಂಜೆ ನಿವಾಸಿ ಚಂದ್ರ ಬಿ.(57) ಕುಸಿದು ಬಿದ್ದು ನಿಧನ ಹೊಂದಿದರು. ನಿನ್ನೆ ಬೆಳಿಗ್ಗೆ ಯಾವುದೋ ಅಗತ್ಯಕ್ಕೆ ಬದಿಯಡ್ಕ ನೋಂದಾವಣಾ ಕಚೇರಿಗೆ ತಲುಪಿದಾಗ ಅಲ್ಲಿ ಕುಸಿದು ಬಿದ್ದಿದ್ದು ಕೂಡಲೇ ಕಾಸರಗೋಡು ಖಾಸಗಿ ಆಸ್ಪತ್ರೆಗೆ ಕೊಂಡುಹೋಗಲಾಯಿ ತಾದರೂ ಜೀವ ಉಳಿಸಲು ಸಾಧ್ಯ ವಾಗಲಿಲ್ಲ. ಇವರು ವಿವಿಧ ಪತ್ರಿಕೆ ಗಳಲ್ಲಿ ಕಂಪ್ಯೂಟರ್ ಸಿಬ್ಬಂದಿಯಾಗಿ ದುಡಿದಿದ್ದು, ಬಳಿಕ ಸರಕಾರಿ ಉದ್ಯೋಗಕ್ಕೆ ಸೇರ್ಪಡೆಗೊಂಡಿ ದ್ದರು. ಬದಿಯಡ್ಕ ಎಸ್‌ಸಿಎಸ್‌ಟಿ ಹಾಸ್ಟೆಲ್‌ನಲ್ಲಿ ಕುಕ್ ಆಗಿದ್ದ ಇವರು ಕಳೆದ ಜನವರಿಯಲ್ಲಿ ಕಾರಡ್ಕಕ್ಕೆ ವರ್ಗಾವಣೆಗೊಂಡಿದ್ದರು. ತಂದೆ ಮಾಲಿಂಗ ಪಾಟಾಳಿ, ತಾಯಿ ದೇವಕಿ ಈ ಹಿಂದೆ ನಿಧನರಾಗಿ ದ್ದಾರೆ. ಮೃತರು ಪತ್ನಿ ಭವಾನಿ, ಪುತ್ರ ಶ್ರೀಕಾಂತ್, ಸಹೋದರರಾದ ಬಾಬು, ಕೇಶವ, ಸೀತಾರಾಮ, ಮಾಧವ, ಸಹೋದರಿ ಮನೋ ರಮ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.