ಕಾರಿನಲ್ಲಿ ಸಾಗಿಸುತ್ತಿದ್ದ 7.900 ಕಿಲೋ ಗಾಂಜಾ ವಶ: ಯುವಕ ಸೆರೆ

ಕುಂಬಳೆ: ಕಾರಿನಲ್ಲಿ ಸಾಗಿಸುತ್ತಿದ್ದ 7.900 ಕಿಲೋ ಗಾಂಜಾ ವಶಪ ಡಿಸಿಕೊಂಡ ಕುಂಬಳೆ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಶಿರಿಯ ವಳಯಂ ನಿವಾಸಿ ರೌಫ್ (27) ಎಂಬಾತನನ್ನು ಕುಂಬಳೆ ಎಸ್‌ಐ ಕೆ.ಶ್ರೀಜೇಶ್ ನೇತೃತ್ವದ ಪೊಲೀಸರು ಸೆರೆಹಿಡಿದಿದ್ದಾರೆ.

ನಿನ್ನೆ ರಾತ್ರಿ 11 ಗಂಟೆ ವೇಳೆ ಎಸ್‌ಐ ಹಾಗೂ  ತಂಡ ಅಡ್ಕ ಬೈದಲ ದಲ್ಲಿ ಪಟ್ರೋಲಿಂಗ್ ನಡೆಸುತ್ತಿದ್ದಾಗ ನ್ಯಾನೋ ಕಾರು ಆಗಮಿಸಿದೆ. ಅದನ್ನು  ಪೊಲೀಸರು ತಡೆದು ನಿಲ್ಲಿಸಿದಾಗ ಚಾಲಕ ರೌಫ್‌ನ ವರ್ತನೆಯಲ್ಲಿ  ಸಂಶಯ ಗೊಂಡು ಕಾರಿನೊಳಗೆ ತಪಾಸಣೆ ನಡೆಸಿ ದಾಗ ಹಿಂಬದಿ ಸೀಟಿನಡಿ ಬಚ್ಚಿಡಲಾ ಗಿದ್ದ ಗಾಂಜಾ ಪತ್ತೆ ಯಾಗಿದೆ. ಕೂಡಲೇ  ಆತನನ್ನು ಪೊಲೀ ಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಬಳಿಕ ಕೇಸು ದಾಖ ಲಿಸಿ ಬಂಧಿಸಿದ್ದು, ತನಿಖೆ ನಡೆಸಲಾಗು ತ್ತಿದೆ.  ಬಂದ್ಯೋಡು, ಅಡ್ಕ, ಪಚ್ಚಂಬಳ, ಕುಂಬಳೆ ಸಹಿತ ವಿವಿಧೆಡೆಗಳಲ್ಲಿ ಮಾರಾಟಕ್ಕಾಗಿ ಈ ಗಾಂಜಾವನ್ನು ತಂದಿರಿಸಿರುವುದಾಗಿ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹತ್ತು ದಿನಗಳ ಹಿಂದೆಯಷ್ಟೇ  ಕುಂಬಳೆ ಠಾಣೆಯಲ್ಲಿ ಎಸ್‌ಐ ಆಗಿ ಅಧಿಕಾರ ವಹಿಸಿಕೊಂಡಿ ರುವ ಕೆ. ಶ್ರೀಜೇಶ್, ಅನಧಿಕೃತ ದಂಧೆ ವಿರುದ್ಧ ವ್ಯಾಪಕ ಕಾರ್ಯಾಚರಣೆ ನಡೆಸುತ್ತಿ ದ್ದಾರೆ. ನಿನ್ನೆ ಗಾಂಜಾ ವಶಪಡಿಸಿದ ಕಾರ್ಯಾಚರಣೆಯಲ್ಲಿ ಎಸ್ ಐ ಜೊತೆಗೆ ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್‌ಗಳಾದ ರಜಿ, ಮನು, ಗಿರೀಶ್, ಸಿವಿಲ್ ಪೊಲೀಸ್ ಆಫೀಸರ್ ಸುಬಿನ್, ಚಾಲಕ ಅಜೀಶ್ ಮೊದಲಾದವರಿದ್ದರು.

Leave a Reply

Your email address will not be published. Required fields are marked *

You cannot copy content of this page