ಕಾರಿನಲ್ಲಿ ಹೃದಯಾಘಾತ : ಅಣಂಗೂರು ನಿವಾಸಿ ಸಾವು
ಕಾಸರಗೋಡು: ಸಂಬಂಧಿಕರೋ ರ್ವರನ್ನು ರೈಲು ನಿಲ್ದಾಣದಲ್ಲಿ ಬಿಟ್ಟು ಬಳಿಕ ಕಾರು ಚಲಾಯಿಸಿ ಹಿಂತಿ ರುಗುತ್ತಿದ್ದ ಅಣಂಗೂರು ನಿವಾಸಿ ಹೃದಯಾಘಾತಕ್ಕೊಳ ಗಾಗಿ ಸಾವನ್ನ ಪ್ಪಿದ ಘಟನೆ ನಡೆದಿದೆ.
ಅಣಂಗೂರು ಯಶೋಧ ನಿಲಯದ ಕೆ.ಬಿ. ದಿನೇಶ್ (70) ಸಾವನ್ನಪ್ಪಿದ ವ್ಯಕ್ತಿ. ಇವರು. ಈ ಹಿಂದೆ ಲಾರಿ ಚಾಲಕರಾಗಿ ದುಡಿಯುತ್ತಿದ್ದರು. ರೈಲು ನಿಲ್ದಾಣದಿಂದ ಕಾರಿನಲ್ಲಿ ಮನೆಗೆ ಹಿಂತಿರುಗುತ್ತಿದ್ದ ದಾರಿ ಮಧ್ಯೆ ನಗರದ ಕರಂದಕ್ಕಾಡಿಗೆ ತಲುಪಿದಾಗ ಅವರಿಗೆ ದೈಹಿಕ ಅಸ್ವಸ್ಥತೆ ಅನುಭವಗೊಂಡಿದೆ. ಆ ಕೂಡಲೇ ಅವರು ಕಾರನ್ನು ರಸ್ತೆ ಬದಿ ನಿಲ್ಲಿಸಿ ಆಟೋ ರಿಕ್ಷಾದಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ತಲುಪಿದರೂ, ಪ್ರಾಣ ರಕ್ಷಿಸಲು ಸಾಧ್ಯವಾಗಲಿಲ್ಲ. ಮೃತರು ಪತ್ನಿ ನಳಿನಿ, ಮಕ್ಕಳಾದ ನಿಹಾಲ್, ನಿಖಿತ, ಅಳಿಯ ಸುನಿಲ್, ಸಹೋದರ ಸಹೋದರಿಯರಾದ ಚಂದ್ರಶೇಖರ್, ಪ್ರಕಾಶ್, ಮನೋಹರನ್, ಮಹೇಶ್, ಜಯಶ್ರೀ, ವಿಜಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.