ಕಾರು, ಸ್ಕೂಟರ್‌ನಲ್ಲಿ ಬಚ್ಚಿಡಲಾಗಿದ್ದ ಮದ್ಯ ವಶ: ಇಬ್ಬರ ಸೆರೆ

ಕಾಸರಗೋಡು: ಕಾರು ಮತ್ತು ಸ್ಕೂಟರ್‌ನಲ್ಲಿ ಬಚ್ಚಿಡಲಾಗಿದ್ದ ೩೪ ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಹೊಸದುರ್ಗ  ಸರ್ಕಲ್  ಅಬಕಾರಿ ತಂಡ ಪತ್ತೆಹಚ್ಚಿ ವಶಪಡಿಸಿಕೊಂಡಿದೆ.

ಇದಕ್ಕೆ ಸಂಬಂಧಿಸಿ ಪನಯಾಲ್ ಕುನ್ನುಚ್ಚಿರ ಡೇವಿಡ್ ಪ್ರಶಾಂತ್ (29) ಮತ್ತು ಪೆರಿಯ ಮೊಯೋಲದ ಉಪೇಂದ್ರನ್ (50) ಎಂಬಿಬ್ಬರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.

ಸ್ಕೂಟರ್‌ನಲ್ಲಿ ಸಾಗಿಸಲಾಗುತ್ತಿದ್ದ 96 ಬಾಟಲಿ ಮದ್ಯದೊಂದಿಗೆ ಡೇವಿಡ್ ಉಪೇಂದ್ರನನ್ನು ಮೊದಲು ಬಂಧಿಸಿದರು. ಆತನನ್ನು ವಿಚಾರಿಸಿದಾಗ ಅಲ್ಲೇ ಪಕ್ಕದ ಹಿತ್ತಿಲೊಂದರಲ್ಲಿ ನಿಲ್ಲಿಸಲಾಗಿದ್ದ ಕಾರಿನಲ್ಲಿ ಮದ್ಯ ಬಚ್ಚಿಟ್ಟಿರುವ ಬಗ್ಗೆ ಮಾಹಿತಿ ಲಭಿಸಿದೆ. ಅದರಂತೆ ಆ ಕಾರನ್ನು ಪರಿಶೀಲಿಸಿದಾಗ ಅದರಲ್ಲಿ ಮದ್ಯ ಪತ್ತೆಯಾಗಿದೆ. ಆ ಬಳಿಕ ಉಪೇಂದ್ರನನ್ನು ಬಂಧಿಸಿ ಪ್ರಕರಣ ದಾಖಲಿಸಲಾಯಿತು.

You cannot copy contents of this page