ಕಾರ್ಮಾರು ಕ್ಷೇತ್ರ ನೂತನ ರಾಜಗೋಪುರಕ್ಕೆ ಶಿಲಾನ್ಯಾಸ

 ಬದಿಯಡ್ಕ: ಜೀರ್ಣೋದ್ಧಾರ ಗೊಳ್ಳುತ್ತಿರುವ ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದ ನೂತನ ರಾಜಗೋಪುರಕ್ಕೆ ಫೆಬ್ರವರಿ ೧ರಂದು ಬೆಳಿಗ್ಗೆ ೯.೪೫ರ ಶುಭ ಮುಹೂರ್ತದಲ್ಲಿ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳವರ ಉಪಸ್ಥಿತಿಯಲ್ಲಿ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಶಿಲಾನ್ಯಾಸಗೈ ಯ್ಯುವರು. ನಂತರ ಜರಗುವ ಸಭಾ ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ  ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸುವರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸತ್ಯನಾ ರಾಯಣ ಬೆಳೇರಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ| ಜಯಪ್ರಕಾಶ್ ನಾರಾಯಣ ತೊಟ್ಟೆ ತ್ತೋಡಿ, ಶ್ಯಾಮ್ ಸುದರ್ಶನ ಹೊಸಮೂಲೆ, ರಾಹುಲ್ ಅಶೋಕ್, ಅಖಿಲೇಶ್ ನಗುಮುಗಂ, ನರೇಂದ್ರ ಬಿ.ಎನ್, ವೆಂಕಟಗಿರೀಶ್ ಪಟ್ಟಾಜೆ ಉಪಸ್ಥಿತರಿರುವರು.

You cannot copy contents of this page