ಕಾಳಧನ ಸಾಗಾಟ ಆರೋಪ: ಪಾಲಕ್ಕಾಡ್‌ನ ಹೋಟೆಲ್‌ಗೆ ಪೊಲೀಸ್ ದಾಳಿ; ಘರ್ಷಣೆ
ಪಾಲಕ್ಕಾಡ್: ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರಕ್ಕೆ ನ. 20ರಂದು ಉಪಚುನಾವಣೆ ನಡೆಯಲಿರು ವಂತೆಯೇ ಕಾಂಗ್ರೆಸ್ ನೇತಾರರು ತಂಗಿರುವ ಹೋಟೆಲ್ ಕೊಠಡಿಗೆ ಚುನಾವಣೆಗೆ ಬಳಸಲು ಕಾಳಧನ ತಲುಪಿಸಿರುವುದಾಗಿ ಲಭಿಸಿದ ಮಾಹಿತಿಯಂತೆ ಅಲ್ಲಿಗೆ ಪೊಲೀಸರು ದಿಢೀರ್ ದಾಳಿ ನಡೆಸಿದ್ದು, ಅದು ಘರ್ಷಣೆಗೆ ದಾರಿಮಾಡಿಕೊಟ್ಟಿದೆ.
ಮತದಾರರಿಗೆ ವಿತರಿಸಲು ಯುಡಿಎಫ್ ಅಭ್ಯರ್ಥಿ ರಾಹುಲ್ ಮಾಂಕೂಟತ್ತಿಲ್‌ರಿಗೆ ಅನಧಿಕೃತವಾಗಿ ಕಾಳಧನ ರವಾನಿಸಲಾಗಿದೆ ಎಂದು ಆರೋಪಿಸಿ ಚುನಾವಣಾ ಆಯೋಗಕ್ಕೆ ದೂರು ಲಭಿಸಿತ್ತು. ಅದರಂತೆ ನಿನ್ನೆ ರಾತ್ರಿ 12 ಗಂಟೆಗೆ ಪೊಲೀಸರು ಹೋಟೆಲ್‌ಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಆದರೆ ಪರಿಶೀಲನೆಯಲ್ಲಿ ಹಣ ಪತ್ತೆಹಚ್ಚಲು ಪೊಲೀಸರಿಗೆ ಸಾಧ್ಯವಾಗಿ ರಲಿಲ್ಲ. ಕಾರಿನಲ್ಲಿ ಹಣ ತಲುಪಿಸಿರು ವುದಾಗಿ ಆರೋಪಿಸಲಾಗಿತ್ತು. ಆಗ ಅಭ್ಯರ್ಥಿ ಸೇರಿದಂತೆ ಕಾಂಗ್ರೆಸ್‌ನ ಹಲವು ನೇತಾರರು ಹೋಟೆಲ್‌ನ ಕೊಠಡಿಯಲ್ಲಿದ್ದರೆಂದು ಬಿಜೆಪಿ ಮತ್ತು ಸಿಪಿಎಂ ನೇತಾರರು ಆರೋಪಿಸಿದ್ದಾರೆ. ಆ ಹೋಟೆಲ್‌ನಲ್ಲಿ ಕಾಂಗ್ರೆಸ್‌ನ ಕೆಲವು ಮಹಿಳಾ ನೇತಾರರೂ ತಂಗಿದ್ದರು. ಅವರು ವಾಸಿಸುತ್ತಿದ್ದ ಕೊಠಡಿಗಳಿಗೂ ಪೊಲೀಸರು ನುಗ್ಗಿ ತಪಾಸಣೆ ನಡೆಸಿದ್ದಾರೆ. ಆದರೆ ಮಹಿಳೆಯರು ವಾಸಿಸುವ ಕೊಠಡಿಗೆ ತಪಾಸಣೆ ನಡೆಸಲು ಮಹಿಳಾ ಪೊಲೀಸರು ಇರಬೇಕೆಂಬ ನಿಬಂಧನೆಯಿದ್ದರೂ ದಾಳಿ ನಡೆಸಿದ ತಂಡದಲ್ಲಿ ಮಹಿಳಾ ಪೊಲೀಸರು ಇರಲಿಲ್ಲವೆಂದು ಕಾಂಗ್ರೆಸ್ ನೇತಾರರು ಆರೋಪಿಸಿ ದ್ದಾರೆ. ನಿನ್ನೆ ರಾತ್ರಿ ಆರಂಭ ಗೊಂಡ ದಾಳಿ ಇಂದು ಮುಂಜಾನೆ 3.15ರ ತನಕ ಮುಂದುವರಿದಿದೆ. ಸಮವಸ್ತ್ರ ಧರಿಸದೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದರು. ಮಹಿಳಾ ನೇತಾರರು ತಂಗಿದ್ದ ಕೊಠಡಿಗೆ ಯಾವುದೇ ರೀತಿಯ ಮುನ್ಸೂಚನೆ ನೀಡದೆ ಪೊಲೀಸರು ದಾಳಿ ನಡೆಸಿದ್ದಾರೆಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಅದನ್ನು ತಡೆದಾಗ ಅಲ್ಲಿ ಘರ್ಷಣೆಯ ವಾತಾವರಣ ಸೃಷ್ಟಿಯಾಯಿತು. ಆ ವೇಳೆ ಸಿಪಿಎಂ ಮತ್ತು ಕಾಂಗ್ರೆಸ್ ಕಾರ್ಯ ಕರ್ತರು ಅಲ್ಲಿಗೆ ಆಗಮಿಸಿ ಕಾಳಧನದ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿದಾಗ ಅಲ್ಲಿ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ತಿರುಗುವಂತೆ ಮಾಡಿತು. ಈ ಮಧ್ಯೆ ಸಿಪಿಎಂ ಮತ್ತು ಕಾಂಗ್ರೆಸ್ ಕಾರ್ಯಕ ರ್ತರ ಮಧ್ಯೆ ಪರಸ್ಪರ ಹೊಕೈ ನಡೆಯಿತು. ಕೊನೆಗೆ ಹೆಚ್ಚುವರಿ ಪೊಲೀ ಸರು ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದರು.