ಕಾಸರಗೋಡಿನಿಂದ ಎಂಡಿಎಂಎ ಸಹಿತ ತಿರುವನಂತಪುರಕ್ಕೆ ತೆರಳಿದ್ದ ಯುವಕ ಸೆರೆ
ತಿರುವನಂತಪುರ: ತಿರುವನಂತಪು ರದಲ್ಲಿ ಎಂಡಿಎಂಎ ಸಹಿತ ಸಿನಿಮಾ ಅಸಿಸ್ಟೆಂಟ್ ಡೈರೆಕ್ಟರ್ ಸೆರೆಯಾಗಿದ್ದಾನೆ. ವೆಳಿಂಞಂ ಟೌನ್‌ಶಿಪ್ ಕಾಲನಿಯಲ್ಲಿ ವಾಸಿಸುವ ಜಸಿಂ (35)ನನ್ನು ಶ್ಯಾಡೋ ಪೊಲೀಸರು ಹಾಗೂ ಕರಮನ ಪೊಲೀಸರು ಸೇರಿ ಬಂಧಿಸಿದ್ದಾರೆ. ಈತನಿಂದ 2.8 ಗ್ರಾಂ ಎಂಡಿಎಂಎ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆದಿತ್ಯವಾರ ಬೆಳಿಗ್ಗೆ ಎಂಡಿಎಂಎ ಸಹಿತ ಕಾಸರಗೋಡಿನಿಂದ ರೈಲಿನಲ್ಲಿ ತಂಬಾನೂರಿಗೆ ತಲುಪಿದ ಜಸೀಂ ಬಸ್‌ನಲ್ಲಿ ಕೈಮನತ್ ಎಂಬಲ್ಲಿಗೆ ತಲುಪಿದ್ದಾನೆ. ಶ್ಯಾಡೋ ತಂಡಕ್ಕೆ ಲಭಿಸಿದ ರಹಸ್ಯ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ತಲುಪಿ ಈತನನ್ನು ಸೆರೆ ಹಿಡಿದಿದ್ದಾರೆ. ಆರೋಪಿಯನ್ನು ನ್ಯಾ ಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.