ಕಾಸರಗೋಡು ಜಿಲ್ಲೆಯ 40ನೇ ವರ್ಷಾಚರಣೆ: 24ರಂದು ಉದ್ಘಾಟನೆ

ಕಾಸರಗೋಡು: ಜಿಲ್ಲೆಯ 40ನೇ ವಾರ್ಷಿಕ  ಆಚರಣೆ  ಮೇ 24ರಂದು ನಡೆಯಲಿದೆ. ಅಂದು ಬೆಳಿಗ್ಗೆ 11 ಗಂಟೆಗೆ ಕಲೆಕ್ಟರೇಟ್ ಆವರಣದಲ್ಲಿ  ಗಿಡಗಳನ್ನು ನೆಟ್ಟು ಜಿಲ್ಲಾಧಿಕಾರಿ ಕೆ. ಇಂಬಶೇಖರ್ ಜಿಲ್ಲಾ ಮಟ್ಟದ ಉದ್ಘಾಟನೆ ನೆರವೇರಿ ಸುವರು.  ಜಿಲ್ಲಾಡಳಿತದ ನೇತೃತ್ವದಲ್ಲಿ ಜಿಲ್ಲಾ ಇನ್ಫರ್ಮೇಶನ್ ಆಫೀಸ್, ಸಾಮಾಜಿಕ ಅರಣ್ಯ ವಿಭಾಗ, ನೆಹರೂ ಯುವ ಕೇಂದ್ರ ಎಂಬಿವುಗಳ ಸಹಕಾರ ದೊಂದಿಗೆ ಕಾರ್ಯಕ್ರಮ ನಡೆಯಲಿದೆ. ಅಂದು ಮಧ್ಯಾಹ್ನ 1.15ಕ್ಕೆ ಜಿಲ್ಲೆಯ ಸರಕಾರಿ ನೌಕರರಿಗೆ ಜಿಲ್ಲಾ ಇನ್ಫರ್ಮೇಶನ್ ಆಫೀಸ್,  ಅಕ್ಷರ ಲೈಬ್ರೆರಿಯ ನೇತೃತ್ವದಲ್ಲಿ ಕಾಸರಗೋಡಿಗೆ 40 ಎಂಬ ವಿಷಯದಲ್ಲಿ ರಸಪ್ರಶ್ನೆ ಸ್ಪರ್ಧೆ ನಡೆಯಲಿ ರುವುದು. ಜಿಲ್ಲೆಯ ೪೦ನೇ ವಾರ್ಷಿಕಾ ಚರಣೆಯನ್ನು ಯಶಸ್ವಿಯಾಗಿ ನಡೆಸುವಂಗ ವಾಗಿ  ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳ ಸಭೆ ಇಂದು ಅಪರಾಹ್ನ ೩.೩೦ಕ್ಕೆ ಆನ್‌ಲೈನ್ ಮೂಲಕ ನಡೆಯಲಿದೆ.

RELATED NEWS

You cannot copy contents of this page