ಕಿಡ್ನಿ ಸಂಬಂಧ ಅಸೌಖ್ಯ: ಯುವಕ ಮೃತ್ಯು

ಕುಂಬಳೆ: ಕಿಡ್ನಿ ಸಂಬಂಧ ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದ ಯುವಕ ಮೃತಪಟ್ಟನು.

ಬಂದ್ಯೋಡಿನ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ದಿ| ಆದಂ ಸಕಲೇಶಪುರ-ನಫೀಸ ದಂಪತಿಯ ಪುತ್ರ ಉಮ ರುಲ್ ಫಾರೂಕ್ (31) ಮೃತಪಟ್ಟ ವ್ಯಕ್ತಿ. ಕೆಲವು ಕಾಲದಿಂದ ಇವರಿಗೆ ಕಿಡ್ನಿ ಸಂಬಂಧ ಅಸೌಖ್ಯ ಬಾಧಿಸಿದ್ದು, ಇದರಿಂದ ಡಯಾಲಿಸಿಸ್ ಸಹಿತ ಚಿಕಿತ್ಸೆ ನಡೆಸುತ್ತಿದ್ದರು. ಇಂದು ಮುಂಜಾನೆ ಮನೆಯಲ್ಲಿ ಅಸೌಖ್ಯ ಉಲ್ಭಣಗೊಂಡು ನಿಧನ ಸಂಭವಿಸಿದೆ.

ಮೃತರು ಪತ್ನಿ ಫಾತಿಮತ್ ಪರ್ಸಾನ, ಪುತ್ರ ಆದಂ ಫೈಸಾನ್, ಸಹೋದರ-ಸಹೋದರಿ ಯರಾದ ನಾಸರ್, ಸಮೀರ್, ಅಶ್ರಫ್, ಸಿದ್ದಿಕ್, ರಸಾಕ್, ಅಬ್ಬಾಸ್, ರಮ್ಲ, ಕಲಂದರ್‌ಬೀವಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page