ಕುಂಜತ್ತೂರು ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿಜ್ಞಾನೋತ್ಸವಕ್ಕೆ ಚಾಲನೆ

ಮಂಜೇಶ್ವರ: ಮಂಜೇಶ್ವರ ಉಪಜಿಲ್ಲಾ ಮಟ್ಟದ ವಿಜ್ಞಾನೋತ್ಸವಕ್ಕೆ ಇಂದು ಬೆಳಿಗ್ಗೆ ಕುಂಜತ್ತೂರು ಹೈಯರ್ ಸೆಕೆಂಡರಿ ಶಾಲೆಯಲ್ಲಿ ಧ್ವಜಾ ರೋಹಣಗೈಯ್ಯಲಾಯಿತು. ಇಂದು, ನಾಳೆ ವಿಜ್ಞಾನೋತ್ಸವ ನಡೆಯಲಿದೆ. ಬೆಳಿಗ್ಗೆ ಪಿಟಿಎ ಅಧ್ಯಕ್ಷ ಖಾದರ್ ಹನೀಫ್ ಧ್ವಜಾರೋಹಣಗೈದರು. ಎಇಒ ಜಿತೇಂದ್ರ, ಮುಖ್ಯೋಪಾ ಧ್ಯಾಯ ಬಾಲಕೃಷ್ಣ, ಪ್ರಿನ್ಸಿಪಾಲ್ ಶಿಶುಪಾಲ್, ಶ್ಯಾಮ್ ಭಟ್ ಭಾಗವಹಿಸಿದರು.೧೧೨ ಶಾಲೆಗಳ ಸುಮಾರು ೩೦೦೦ ವಿದ್ಯಾರ್ಥಿಗಳು  ಭಾಗವಹಿಸುವರು. ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸಿದರು. ಪಂ. ಅಧ್ಯಕ್ಷೆ ಜೀನ್ ಲವೀನಾ ಮೊಂ ತೇರೋ ಅಧ್ಯಕ್ಷತೆ ವಹಿಸಿದರು. ಇಂದು ವಿಜ್ಞಾನ, ಗಣಿತ, ಐಟಿ ವಿಭಾಗದ ಮೇಳ ನಡೆಯಲಿದೆ. ನಾಳೆ ಜಿಲ್ಲಾ ಪಂ. ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಭಾಗವಹಿಸುವರು.

RELATED NEWS

You cannot copy contents of this page