ಕುಂಬಳೆ: ಬೆಂಕಿಗಾಹುತಿಯಾದ ಟ್ರಾನ್ಸ್‌ಫಾರ್ಮರ್ ದುರಸ್ತಿ ಬೆನ್ನಲ್ಲೇ ವಿದ್ಯುತ್ ಮೊಟಕು; ಜನರಿಗೆ ಸಮಸ್ಯೆ

ಕುಂಬಳೆ: ಇಲ್ಲಿನ ಭಾಸ್ಕರನಗರದಲ್ಲಿ ಬೆಂಕಿಗಾಹುತಿಯಾದ ಟ್ರಾನ್ಸ್‌ಫಾರ್ಮರ್ ದುರಸ್ತಿ ನಡೆಸಿದರೂ ಅದು ಮತ್ತೆ ಹಾನಿಗೀಡಾಗಿದೆ. ಇದರಿಂದ ಈ ಪ್ರದೇಶದ ಜನರಿಗೆ ನಿನ್ನೆ ರಾತ್ರಿಯಿಂದ    ಬೆಳಕಿಲ್ಲದೆ ಸಮಸ್ಯೆ ಎದುರಿಸಬೇಕಾಗಿ ಬಂದಿದೆ.

ಭಾಸ್ಕರನಗರದಲ್ಲಿರುವ ಟ್ರಾನ್ಸ್‌ಫಾರ್ಮರ್ ನಿನ್ನೆ ಸಂಜೆ ೪ ಗಂಟೆ ವೇಳೆ ಬೆಂಕಿಗಾಹುತಿಯಾಗಿತ್ತು. ಟ್ರಾನ್ಸ್‌ಫಾರ್ಮರ್‌ಗಳ ಮೇಲ್ಭಾಗದಿಂದ ಬೆಂಕಿ ಹೊಗೆ ಕಾಣಿಸಿದೆ. ಅದನ್ನು ಕಂಡ ನಾಗರಿಕರು ಕೆಎಸ್‌ಇಬಿ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದರು. ಕೂಡಲೇ ನೌಕರರು ತಲುಪಿ ವಿದ್ಯುತ್ ಸಂಪರ್ಕ ವಿಚ್ಛೇಧಿಸಿದರು. ಸಮೀಪದ ನವೋದಯ ಫ್ರೆಂಡ್ಸ್ ಕ್ಲಬ್ ಕಾರ್ಯಕರ್ತರು ಹಾಗೂ ನಾಗರಿಕರು ಸೇರಿ ಬೆಂಕಿ ನಂದಿಸಿದರು. ಕಳೆದೆರಡು ದಿನಗಳಿಂದ ಈ ಟ್ರಾನ್ಸ್‌ಫಾರ್ಮರ್‌ನಲ್ಲಿ ಬೆಂಕಿ ಹಾಗೂ ಹೊಗೆ ಕಾಣಿಸತೊಡ ಗಿತ್ತೆಂದು ನಾಗರಿಕರು ತಿಳಿಸಿದ್ದಾರೆ. ನಿನ್ನೆ ಇದು ಬಹುತೇಕ ಉರಿದಿದೆ. ಇದನ್ನು ನೌಕರರು ತಾತ್ಕಾಲಿಕವಾಗಿ ದುರಸ್ತಿಗೊಳಿಸಿ ತೆರಳಿದ್ದರು. ಆದರೆ ರಾತ್ರಿ ವೇಳೆ ಈ ಟ್ರಾನ್ಸ್‌ಫಾರ್ಮರ್‌ನಿಂದ ವಿದ್ಯುತ್ ವಿತರಣೆ ಪೂರ್ಣವಾಗಿ ಮೊಟಕುಗೊಂಡಿದೆ.

You cannot copy contents of this page