ಕುಂಬಳೆ ರೈಲು ನಿಲ್ದಾಣ ಅವಗಣನೆ: ದೇಶೀಯ ವೇದಿಯಿಂದ  ನಾಳೆ ಪ್ರತಿಭಟನೆ

ಕುಂಬಳೆ: ೪೦ ಎಕ್ರೆಯಷ್ಟು ಸ್ಥಳದಲ್ಲಿ ವ್ಯಾಪಿಸಿರುವ ಸ್ವಂತವಾಗಿ ಸ್ಥಳ ಹೊಂದಿರದ, ಪ್ರಯಾಣಿಕರು ಕಿಕ್ಕಿರಿದು ತುಂಬಿರುವ, ಆದಾಯತರುವ ಕುಂಬಳೆ ರೈಲು ನಿಲ್ದಾಣವನ್ನು ಅಭಿವೃದ್ಧಿಪಡಿಸದೆ ಅವಗಣಿಸುವ ರೈಲ್ವೇ ಅಧಿಕಾರಿಗಳ  ನಿಲುವನ್ನು  ಪ್ರತಿಭಟಿಸಿ ಮೊಗ್ರಾಲ್ ದೇಶೀಯ ವೇದಿಯ ಆಶ್ರಯದಲ್ಲಿ ಕೇರಳ ರಾಜ್ಯೋತ್ಸವ ದಿನವಾದ ನಾಳೆ ಸಂಜೆ ೪ ಗಂಟೆಗೆ ರೈಲ್ವೇ ಸ್ಟೇಶನ್ ಪರಿಸರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆಯೆಂದು ಕುಂಬಳೆಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ದೇಶೀಯ  ವೇದಿ ಪದಾಧಿಕಾರಿಗಳು ತಿಳಿಸಿದ್ದಾರೆ. ನಿಲ್ದಾಣದ ಆದಾಯಕ್ಕನುಸಾರವಾಗಿ ಹಾಗೂ ಪ್ರಯಾಣಿಕರಿಗನುಸಾರವಾಗಿ ಮೂಲಭೂತ ಅಭಿವೃದ್ದಿ ನಡೆಸಬೇಕೆಂದು ಆಗ್ರಹಿಸಲಾಗಿದೆ. ಹೆಚ್ಚು ರೈಲುಗಳಿಗೆ ನಿಲ್ದಾಣದಲ್ಲಿ ನಿಲುಗಡೆ ಮಂಜೂರು ಮಾಡಬೇಕು, ಪ್ರಯಾಣಿಕರಿಗೆ ಮಳೆ, ಬಿಸಿಲಿನಿಂದ ರಕ್ಷಣೆ ಪಡೆಯಲು ಫ್ಯಾಟ್ ಫಾರ್ಮ್‌ಗೆ ಮೇಲ್ಛಾವಣಿ ನಿರ್ಮಿಸ ಬೇಕು, ರಾತ್ರಿ ವೇಳೆ ಕತ್ತಲು ಇದ್ದು, ಬೆಳಕಿನ ವ್ಯವಸ್ಥೆ ಮಾಡಬೇಕು, ಕುಡಿಯುವ ನೀರು ಸೌಕರ್ಯ ಏರ್ಪ ಡಿಸಬೇಕು, ನಿಲ್ದಾಣದಲ್ಲಿ ರಿಸರ್ವೇಶನ್ ಸೌಕರ್ಯ ಏರ್ಪಡಿಸಬೇಕು, ಸ್ಟೇಟ್ಲಿಂಗ್ ಲೈನ್‌ಗಳು, ಪಿಟ್ ಲೈನ್ ಸಹಿತ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ನಡೆಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಗು ವುದೆಂದು ಪದಾಧಿಕಾರಿಗಳು ತಿಳಿಸಿದ್ದಾರೆ.

ಪ್ರತಿಭಟನೆಯನ್ನು ಕಣ್ಣೂರು ಯೂನಿವರ್ಸಿಟಿ ಪರೀಕ್ಷಾ ಬೋರ್ಡ್ ಮಾಜಿ ಕಂಟ್ರೋಲರ್ ಪ್ರೊ. ಕೆ.ಪಿ.  ಜಯರಾಜನ್ ಉದ್ಘಾಟಿಸುವರು. ಪ್ಯಾಸೆಂಜರ್ಸ್ ಅಸೋಸಿಯೇಶನ್ ಪದಾಧಿಕಾರಿಗಳು, ತ್ರಿಸ್ತರ ಪಂ. ಆಡಳಿತ ಸಮಿತಿ ಸದಸ್ಯರು,  ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಪದಾಧಿಕಾರಿಗಳು, ಅಧ್ಯಾಪಕರು, ವಿದ್ಯಾರ್ಥಿಗಳು, ಸಂಘಟನೆಯ ಮುಖಂಡರು, ಸಾಂಸ್ಕೃತಿಕ ನಾಯಕ ರು, ಹೋಟೆಲ್ ಅಸೋಸಿಯೇಶನ್ ಪದಾಧಿಕಾರಿಗಳು ಭಾಗವಹಿಸು ವರೆಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ದೇಶೀಯವೇದಿ ಅಧ್ಯಕ್ಷ ವಿಜಯ ಕುಮಾರ್, ಪ್ರಧಾನ ಕಾರ್ಯದರ್ಶಿ ರಿಯಾಸ್ ಕರೀಂ, ಕೋಶಾಧಿಕಾರಿ ಎಚ್.ಎಂ.. ಕರೀಂ, ಉಪಾಧ್ಯಕ್ಷರಾದ ಅಶ್ರಫ್ ಪೆರುವಾಡ್, ಅಬ್ದುಲ್ಲ ಕುಂಞಿ, ಪಿ.ಎಂ. ಮುಹಮ್ಮದ್ ಕುಂಞಿ, ಬಿ.ಎ. ಮುಹಮ್ಮದ್ ಕುಂಞಿ, ನಿಸಾರ್ ಪೆರುವಾಡ್ ಭಾಗವಹಿಸಿದರು.

You cannot copy contents of this page