ಕುಂಬಳೆಯಲ್ಲಿ ಆರಂಭಿಸಿದ ಪಾರ್ತಿಸುಬ್ಬ ಕಲಾ ಕ್ಷೇತ್ರ ನಿರ್ಮಾಣ ಯೋಜನೆ ಅರ್ಧದಲ್ಲೇ ಮೊಟಕು: ಕಲಾವಿದರು, ಅಭಿಮಾನಿಗಳಲ್ಲಿ ನಿರಾಸೆ
ಕುಂಬಳೆ: ಯಕ್ಷಗಾನವೆಂಬ ಪ್ರಸಿದ್ಧ ಕಲೆಯನ್ನು ಸಪ್ತಭಾಷಾ ಸಂಗಮ ಭೂಮಿಯಲ್ಲಿ ಉಳಿಸಿ ಬೆಳೆಸುವುದರ ಜೊತೆಗೆ ಯಕ್ಷಗಾನದ ಪಿತಾಮಹ ಕುಂಬಳೆ ಪಾರ್ತಿಸುಬ್ಬರ ಸ್ಮರಣಾರ್ಥವಾಗಿ ಸರಕಾರ ಆರಂಭಿಸಿದ ಯೋಜನೆಯೊಂದು ಅರ್ಧದಲ್ಲೇ ಮೊಟಕುಗೊಂಡಿದೆ.
ಪಾರ್ತಿಸುಬ್ಬರ ಸ್ಮರಣಾರ್ಥ ೨೦೧೦ರಲ್ಲಿ ಕುಂಬಳೆ ಬಳಿ ಮುಂಜುಂಗಾವಿನಲ್ಲಿ ಕಲಾ ಕ್ಷೇತ್ರ ನಿರ್ಮಿಸುವ ಯೋಜನೆ ಜ್ಯಾರಿಗೊಳಿಸಲಾಗಿತ್ತು. ಅದರ ಕಟ್ಟಡ ಅರ್ಧದಲ್ಲೇ ಮೊಟಕುಗೊಂಡಿದೆ. ಯಕ್ಷಗಾನವನ್ನು ಯುವ ತಲೆಮಾರಿಗೆ ಪರಿಚಯಿಸುವ ಉದ್ದೇಶದಿಂದ ಇಲ್ಲಿ ಅಧ್ಯಯನ, ತರಬೇತಿ ಕೇಂದ್ರ ನಿರ್ಮಿಸುವ ಯೋಜನೆಯಿರಿ ಸಲಾಗಿತ್ತು. ಯಕ್ಷಗಾನ ಕಲಾ ಕ್ಷೇತ್ರದ ಕಾಮಗಾರಿ ನಡೆಯುತ್ತಿರುವಂತೆಯೇ ಕಲಾವಿದರು ಅತ್ಯುತ್ಸಾಹದಿಂದ ಹಲವು ಯಕ್ಷಗಾನ ಕಾರ್ಯಕ್ರಮಗಳನ್ನು ಇಲ್ಲಿ ನಡೆಸಿದ್ದರು. ಆದರೆ ಸರಕಾರ ಜ್ಯಾರಿಗೊಳಿಸಿದ ಯೋಜನೆ ಅರ್ಧದಲ್ಲೇ ಮೊಟಕುಗೊಂಡಿರುವುದು ಯಕ್ಷಗಾನ ಕಲಾವಿದರು ಹಾಗೂ ಅಭಿಮಾನಿಗಳಲ್ಲಿ ತೀವ್ರ ನಿರಾಸೆ ಮೂಡಿಸಿದೆ. ಯೋಜನೆ ಜ್ಯಾರಿಗೊಳಿಸಿ ಒಂದೂವರೆ ದಶಕವಾ ದರೂ ಯೋಜನೆಯನ್ನು ಪೂರ್ತಿಗೊ ಳಿಸಲು ಆ ಮೂಲಕ ಕಲಾಕ್ಷೇತ್ರವನ್ನು ಸಂರಕ್ಷಿಸಲು ಅಧಿಕಾರಿಗಳ ಭಾಗದಿಂದ ಯಾವುದೇ ಕ್ರಮ ಉಂಟಾಗಿಲ್ಲ.
ಲಕ್ಷಾಂತರ ರೂಪಾಯಿ ವ್ಯಯಿಸಿ ನಿರ್ಮಿಸಿದ ಕಟ್ಟಡ ಈಗ ನಾಶದ ಹಂತಕ್ಕೆ ತಲುಪಿದೆ. ಸಂಜೆಯಾಗು ತ್ತಿದ್ದಂತೆ ಸಮಾಜದ್ರೋಹಿಗಳು ಈ ಕಟ್ಟಡದಲ್ಲಿ ಸೇರುತ್ತಿದ್ದಾರೆ. ಕಟ್ಟಡದೊಳಗೆ ಮದ್ಯದ ಬಾಟ್ಲಿಗಳು ತುಂಬಿಕೊಂಡಿದೆ. ಕಟ್ಟಡದ ಹೆಂಚುಗಳನ್ನು ಪುಡಿಗೈಯ್ಯ ಲಾಗಿದೆ. ಇದರಿಂದ ಮೇಲ್ಛಾವಣಿ ಅಪಾಯ ಭೀತಿಯನ್ನು ಎದುರಿಸು ತ್ತಿದೆ. ಈ ಯೋಜನೆಯನ್ನು ಪೂರ್ತಿ ಗೊಳಿಸಲು ಜನಪ್ರತಿನಿಧಿಗಳು ಮಧ್ಯ ಸ್ಥಿಕೆ ವಹಿಸಬೇಕೆಂದು ಕಲಾವಿದರು, ನಾಗರಿಕರು ಒತ್ತಾಯಿಸುತ್ತಿದ್ದಾರೆ.