ಕುಂಬಳೆಯಲ್ಲಿ ದಾರಿ ತಪ್ಪಿಸುವ ಸೂಚನಾ ಫಲಕ ಸರಿಪಡಿಸಿದ ಅಧಿಕಾರಿಗಳು

ಕುಂಬಳೆ: ಕುಂಬಳೆಯಲ್ಲಿ ಪ್ರಯಾ ಣಿಕರ ದಾರಿ ತಪ್ಪಿಸುತ್ತಿದ್ದ ಸೂಚನಾ ಫಲಕವನ್ನು ಅಧಿಕಾರಿಗಳು ಸರಿಪಡಿ ಸಿದ್ದಾರೆ. ಕುಂಬಳೆ ಪೇಟೆಯ ರಾಷ್ಟ್ರೀಯ ಹೆದ್ದಾರಿ ಸಮೀಪ ಊರಾಲುಂಗಲ್  ಸೊಸೈಟಿ ಅಧಿಕಾರಿಗಳು ಸ್ಥಾಪಿಸಿದ್ದ ದಾರಿ ಸೂಚನಾ ಫಲಕ ಪ್ರಯಾ ಣಿಕರಿಗೆ  ಗೊಂದಲ ಸೃಷ್ಟಿಸುತ್ತಿತ್ತು. ಮಂಗಳೂರು ಭಾಗಕ್ಕೆ  ದಾರಿ ಸೂಚಿಸುತ್ತಿರುವುದು ಕಾಸರಗೋಡು  ಭಾಗಕ್ಕಾಗಿತ್ತು. ಅದೇ ರೀತಿ ಸೀತಾಂಗೋಳಿ ಭಾಗಕ್ಕೆ ಸೂಚಿಸಿದ ಭಾಗದಲ್ಲಿ ರಸ್ತೆಯೇ ಇಲ್ಲ.  ಈ ನಾಮಫಲಕದಿಂದ ಪ್ರಯಾ ಣಿಕರು ಸಮಸ್ಯೆಗೊಳಗಾಗುತ್ತಿರುವ ಕುರಿತು ‘ಕಾರವಲ್’ ನಿನ್ನೆ ವರದಿ ಪ್ರಕಟಿಸಿತ್ತು. ವರದಿಗೆ ಸ್ಪಂದಿಸಿದ ಅಧಿಕಾರಿಗಳು ತಕ್ಷಣ ದಾರಿ ಸೂಚನಾ ಫಲಕವನ್ನು ಸರಿಯಾದ ರೀತಿಯಲ್ಲಿ ಸ್ಥಾಪಿಸಿದ್ದಾರೆ.

RELATED NEWS

You cannot copy contents of this page