ಕುಂಬಳೆಯಲ್ಲಿ ಮಡಿಕೈ ಕಮ್ಮಾರನ್ ಸ್ಮರಣೆ

ಕುಂಬಳೆ: ಕುಂಬಳೆ ಪಂಚಾಯತ್ ಸಮಿತಿ ವತಿಯಿಂದ ಬಿಜೆಪಿಯ ಹಿರಿಯ ನೇತಾರರಾಗಿದ್ದ ಕಾಸರಗೋಡು ಮಾಜಿ ಜಿಲ್ಲಾಧ್ಯಕ್ಷ, ಮಾಜಿ ರಾಜ್ಯ ಸಮಿತಿ ಉಪಾಧ್ಯಕ್ಷ ಮಡಿಕೈ ಕಮ್ಮಾರನ್Àರ ೬ನೇ ವರ್ಷದ ಸಂಸ್ಮರಣ ಕಾರ್ಯಕ್ರಮ ಕುಂಬಳೆ ಪಕ್ಷದ ಕಚೇರಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡುವ ಮೂಲಕ ನಡೆಯಿತು. ಕುಂಬಳೆ ಪಂಚಾಯತ್ ಸಮಿತಿಯ ಅಧ್ಯಕ್ಷರಾದ ಸುಜಿತ್ ರೈ ಅಧ್ಯಕ್ಷತೆ ವಹಿಸಿದರು. ಮಂಡಲ ಉಪಾಧ್ಯಕ್ಷ ಕೆ. ರಮೇಶ ಭಟ್, ಪ್ರೇಮಲತಾ ಎಸ್, ಕಾರ್ಯದರ್ಶಿ ಕೆ. ಸುಧಾಕರ ಕಾಮತ್, ಯುವಮೋರ್ಚಾ ಕುಂಬಳೆ ಅಧ್ಯಕ್ಷ ಅಜಿತ್ ಕುಮಾರ್, ಜನಪ್ರತಿನಿದಿಗಳಾದ ಮೋಹನ ಕೆ, ಸುಲೋಚನಾ, ಪುಷ್ಪಲತಾ, ವಿದ್ಯಾ ಏನ್ ಪೈ, ಹಿರಿಯರಾದ ವೇಣು ಕಡಪ್ಪುರ, ಗೋಪಾಲ ಪೂಜಾರಿ, ಶಶಿ ಕುಂಬಳೆ ಉಪಸ್ಥಿತರಿದ್ದರು. ಪಂಚಾಯತ್ ಸದಸ್ಯ ವಿವೇಕಾನಂದ ಶೆಟ್ಟಿ ಸ್ವಾಗತಿಸಿ, ಅಜಯ ಎಂ. ವಂದಿಸಿದರು.

You cannot copy contents of this page