ಕುಂಬ್ಡಾಜೆ: ಮೈತ್ರಿ ಗ್ರಂಥಾಲಯಕ್ಕೆ ಭೂಮಿ ಆಡಳಿತ ಪಕ್ಷದ ಒತ್ತಾಸೆ- ಬಿಜೆಪಿ ಆರೋಪ

ಬದಿಯಡ್ಕ: ಅರ್ಧ ಬೆಲೆಗೆ ಸ್ಕೂಟರ್, ಲ್ಯಾಪ್‌ಟಾಪ್ ನೀಡುವು ದಾಗಿ ಭರವಸೆಯೊಡ್ಡಿ 250ಕ್ಕಿಂತಲೂ ಹೆಚ್ಚು ಮಂದಿಯಿಂದ ಹಣ ಪಡೆದು ವಂಚಿಸಿದ ಮಾರ್ಪನಡ್ಕದ ಮೈತ್ರಿ ಗ್ರಂಥಾಲಯಕ್ಕೆ ಭೂಮಿ ಹಂಚಿಕೆ ಬಗ್ಗೆ ಕುಂಬ್ಡಾಜೆ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಅಜೆಂಡಾ ಸೇರಿಸಿರುವುದು ಆಡಳಿತ ಒಕ್ಕೂಟವಾದ ಯುಡಿಎಫ್   ಪಂಚಾಯತ್‌ನ  ಜನತೆಯನ್ನು ವಂಚಿಸುವ ಹುನ್ನಾರ ವಾಗಿದೆಯೆಂದು ಬಿಜೆಪಿ ಕುಂಬ್ಡಾಜೆ ಪಂಚಾಯತ್ ಸಮಿತಿ ಆರೋಪಿಸಿದೆ. ಇದೀಗ ಮೈತ್ರಿ ಗ್ರಂಥಾಲಯದ ಹೆಸರು ಬದಲಾವಣೆ ಮಾಡಿ ಮೈತ್ರಿ ಸೇವಾ ಸಂಘ ಎಂಬುದಾಗಿ ಮರು ನಾಮಕರಣ ಮಾಡಿರುವುದು ಆಡಳಿತ ಒಕ್ಕೂಟದ ಒತ್ತಾಸೆಯಿಂದಲೇ ಆಗಿದೆ. ಈ ಬಗ್ಗೆ ಶೀಘ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದೂ ಬಿಜೆಪಿ ಒತ್ತಾಯಿಸಿದೆ.

RELATED NEWS

You cannot copy contents of this page