ಕುಕ್ಕೆ ಕ್ಷೇತ್ರ: ಚಂಪಾಷಷ್ಠಿ ಹಿನ್ನೆಲೆಯಲ್ಲಿ ಸೇವೆಗಳಿಗೆ ನಿಯಂತ್ರಣ
ಸುಳ್ಯ: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಜಾತ್ರೆ ಈ ತಿಂಗಳ 27ರಿಂದ ದ. 12ರ ವರೆಗೆ ನಡೆಯಲಿದೆ. ಇದರಂಗವಾಗಿ ಇಲ್ಲಿನ ಪ್ರಧಾನ ಸೇವೆಯಾದ ಸರ್ಪಸಂಸ್ಕಾರ ಇಂದಿನಿAದ ದ. 12ರವರೆಗೆ ನಡೆಯುವುದಿಲ್ಲ. ಆದರೆ ಇತರ ಸೇವೆಗಳು ಎಂದಿನAತೆ ನಡೆಯಲಿದೆ. ಲಕ್ಷ ದೀಪೋತ್ಸವ, ಚೌತಿ, ಪಂಚಮಿ, ಷಷ್ಠಿ ದಿನಗಳಂದು ಕೆಲವು ಸೇವೆಗಳು ನಡೆಯುವುದಿಲ್ಲವೆಂದು ದೇಗುಲದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಚಂಪಾಷಷ್ಠಿ ದ. 7ರಂದು ನಡೆಯಲಿದ್ದು, ಅಂದು ಆಶ್ಲೇಷ ಬಲಿ, ನಾಗಪ್ರತಿಷ್ಠೆ ಸೇವೆ ಇರುವುದಿಲ್ಲ. ನಾಳೆ ಮೃತ್ತಿಕಾ ಪ್ರಸಾದ ತೆಗೆಯುವ ಕಾರ್ಯದ ಕಾರಣ ಭಕ್ತರಿಗೆ ನಾಳೆ ಬೆಳಿಗ್ಗಿನಿಂದ ಮಧ್ಯಾಹ್ನ 2 ಗಂಟೆ ತನಕ ದೇವರ ದರ್ಶನ, ಸೇವೆ ನಡೆಸಲು ಅವಕಾಶವಿರುವುದಿ ಲ್ಲವೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.