ಕೂಲಿ ಕಾರ್ಮಿಕ ಯುವಕನ ಮೃತದೇಹ ಹೊಳೆಯಲ್ಲಿ ಪತ್ತೆ

ವರ್ಕಾಡಿ: ಆನೆಕಲ್ಲು ಹೊಳೆಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ಕೂಲಿ ಕಾರ್ಮಿಕನಾದ ಆನೆಕಲ್ಲು ಬಾಡಿಗೆ ಕ್ವಾರ್ಟ ರ್ಸ್‌ನಲ್ಲಿ ವಾಸಿಸುತ್ತಿದ್ದ ಬಾಲಕೃಷ್ಣ ನಾಯ್ಕ (೩೯)ರ ಮೃತದೇಹ ನಿನ್ನೆ ರಾತ್ರಿ ಹೊಳೆಯಲ್ಲಿ ಪತ್ತೆಯಾಗಿದೆ.  ಕೂಲಿ ಕೆಲಸಕ್ಕೆ ತೆರಳಿ ಮನೆಗೆ ಹಿಂತಿರುಗಿದ ಬಳಿಕ ಹೊರಗೆ ಹೋಗುವುದಾಗಿ ತಿಳಿಸಿ ತೆರಳಿದ ಬಾಲಕೃಷ್ಣ ನಾಯ್ಕ ನಾಪತ್ತೆಯಾದ ಹಿನ್ನೆಲೆಯಲ್ಲಿ ಸ್ಥಳೀಯರು ಹುಡುಕಾಟ ನಡೆಸುತ್ತಿದ್ದ ವೇಳೆ ಹೊಳೆಯಲ್ಲಿ ಮೃತದೇಹ ಪತ್ತೆಯಾ ಗಿದೆ. ಕೂಡಲೇ ಮಂಜೇಶ್ವರ ಪೊಲೀಸರು ಸ್ಥಳಕ್ಕೆ ತಲುಪಿ ಮೃತದೇಹವನ್ನು ಕಾಸರಗೋ ಡು ಜನರಲ್ ಆಸ್ಪತ್ರೆಗೆ ತಲುಪಿಸಿದ್ದಾರೆ.

ಹೊಳೆ ಬದಿಯಲ್ಲಿ ಇವರ ಮನೆಗೆ ತೆರಳುವ ದಾರಿಯಿದ್ದು, ಆಯತಪ್ಪಿ ಹೊಳೆಗೆ ಬಿದ್ದಿರಬೇಕೆಂದು ಶಂಕಿಸ ಲಾಗಿದೆ. ಮೃತ ಬಾಲಕೃಷ್ಣ ನಾಯ್ಕ ತಾಯಿ ದೇವಕಿ,  ಪತ್ನಿ ಶಾಂಭವಿ, ಸಹೋದರ ಈಶ್ವರ ನಾಯ್ಕ, ಸಹೋದರಿ ಸುಮತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page