ಕೃಷಿಕ ನಿದ್ರೆಯಲ್ಲಿ ನಿಧನ
ನೀರ್ಚಾಲು: ವ್ಯಕ್ತಿಯೊಬ್ಬರು ನಿದ್ರೆಯ ಲ್ಲಿ ನಿಧನಹೊಂ ದಿದ್ದಾರೆ. ನೀರ್ಚಾಲು ಬಳಿಯ ಏಣಿಯರ್ಪು ಪುದುಕೋಳಿ ಯ ಪ್ರಭಾಕರ ಶೆಟ್ಟಿ (84) ಮೃತಪಟ್ಟ ವ್ಯಕ್ತಿ. ನಿನ್ನೆ ರಾತ್ರಿ ಆಹಾರ ಸೇವಿಸಿ ನಿದ್ರಿಸಿದ್ದರು. ಇಂದು ಬೆಳಿಗ್ಗೆ ಏಳದ ಹಿನ್ನೆಲೆಯಲ್ಲಿ ಮನೆಯ ವರು ನೋಡಿದಾಗ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನೀರ್ಚಾಲು ಕೆಎಸಿಎ ಸೊಸೈಟಿಯ ನಿವೃತ್ತ ನೌಕರನಾಗಿದ್ದ ಇವರು ಕೃಷಿಕನೂ ಆಗಿದ್ದರು. ಇವರ ಪತ್ನಿ ಸರೋಜಿನಿ ಈ ಹಿಂದೆ ನಿಧನರಾಗಿದ್ದಾರೆ. ಮೃತರು ಮಕ್ಕಳಾದ ಲೋಲಾಕ್ಷಿ, ಸರಿತ, ಬಬಿತ, ಸ್ಮಿತ, ಕಿಶೋರ್ ಕುಮಾರ್ (ನೀರ್ಚಾಲಿನಲ್ಲಿ ಆಟೋ ಚಾಲಕ), ಅಳಿಯಂದಿರಾದ ಶ್ರೀನಿವಾಸ, ಸುರೇಶ, ಗಣೇಶ, ಹರೀಶ, ಸೊಸೆ ಆಶಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.