ಕೆಎಸ್‌ಆರ್‌ಟಿಸಿಯಲ್ಲಿ ಉಪವಾಸ ಮುಷ್ಕರ
ಕಾಸರಗೋಡು: ಜುಲೈ ತಿಂಗಳ ವೇತನ ಅಗೋಸ್ತ್ ೧೦ ಕಳೆದರೂ ವಿತರಿಸದಿರುವುದನ್ನು ಹಾಗೂ ಓಣಂ ಹಬ್ಬದ ಸೌಲಭ್ಯಗಳನ್ನು ಕೆಎಸ್ ಆರ್‌ಟಿಸಿ ನೌಕರರಿಗೆ ಸತತವಾಗಿ ನಿಷೇಧಿಸುವುದನ್ನು ಪ್ರತಿಭಟಿಸಿ ಟಿಟಿ ಡಿಎಫ್ ರಾಜ್ಯ ಸಮಿತಿಯ ತೀರ್ಮಾ ನದಂತೆ ಕೆಎಸ್‌ಆರ್‌ಟಿಸಿ ಕಾಸರಗೋಡು ಡಿಪೋ ದಲ್ಲಿ ಉಪವಾಸ ಮುಷ್ಕರ ನಡೆಸಲಾಯಿತು. ಪ್ರತಿಭಟ ನೆಯಂಗವಾಗಿ ಡಿಪೋದಲ್ಲ್ಲಿ ಗಂಜಿ ತಯಾರಿಸಿ ವಿತರಿಸ ಲಾಯಿತು. ಮುಷರವನ್ನು ಡಿಸಿಸಿ ಅಧ್ಯಕ್ಷ ಎಕೆ. ಫೈಸಲ್ ಉದ್ಘಾಟಿಸಿದರು. ಎಡರಂಗ ಸರಕಾರ ಕೆಎಸ್‌ಆರ್‌ಟಿಸಿಯನ್ನು ನಾಶಪಡಿಸುತ್ತಿದೆಯೆಂದವರು ಆರೋಪಿಸಿದರು. ಟಿಡಿಎಫ್ ಅಧ್ಯಕ್ಷ ಪಿ.ಕೆ. ಶಂಸುದ್ದೀನ್ ಅಧ್ಯಕ್ಷತೆ ವಹಿಸಿದರು. ಕೆ. ನರೇಂದ್ರನ್, ಬಿಜು ಜೋನ್, ಎಂ.ವಿ. ಪದ್ಮನಾಭನ್, ಗೋಪಾಲಕೃಷ್ಣ ಕುರುಪ್, ಜಲೀಲ್, ಹರಿ, ವಿ. ರಾಮಚಂದ್ರನ್, ಕೆ.ಎಂ. ಕೃಷ್ಣ ಭಟ್, ಶರತ್ ಕುಮಾರ್, ಕೆ. ಉಣ್ಣಿಕೃಷ್ಣನ್ ಮಾತನಾಡಿದರು.